ಶನಿವಾರ, ಜೂನ್ 6, 2020
27 °C

ಯಕ್ಷ ಗಾಯನ ಲೈವ್ | ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಶಿಷ್ಯವೃಂದದವರಿಂದ ಗಾನಾಮೃತ

ಪ್ರಜಾವಾಣಿ ಯಕ್ಷ ಗಾಯನ ಸರಣಿಯ ನಾಲ್ಕನೇ ಕಂತಿನಲ್ಲಿ ಯಕ್ಷಗಾನ ಕಲಾಕೇಂದ್ರ, ಹಂಗಾರಕಟ್ಟೆ, ಐರೋಡಿ ಇದರ ಶಿಷ್ಯವೃಂದದವರಿಂದ ಗಾನಾಮೃತ ನಡೆಯುತ್ತಿದೆ. ಹಾಡುಗಾರಿಕೆಯಲ್ಲಿ ಪ್ರಸಿದ್ಧ ಭಾಗವತರಾದ ಕೆ.ಪಿ.ಹೆಗಡೆ, ರಾಘವೇಂದ್ರ ಮಯ್ಯ, ಸುರೇಶ್ ಶೆಟ್ಟಿ, ಉಮೇಶ್ ಸುವರ್ಣ, ಕಾನಕೋಡು ಪರಮೇಶ್ವರ ನಾಯ್ಕ, ಉದಯ ಕುಮಾರ್ ಹೊಸಾಳ, ಕರುಣಾಕರ ಶೆಟ್ಟಿ, ಗಜೇಂದ್ರ ಶೆಟ್ಟಿ, ಗಣೇಶ್ ಆಚಾರ್ ಇದ್ದಾರೆ. ಮದ್ದಳೆ-ಚೆಂಡೆಯಲ್ಲಿ ಎನ್.ಜಿ.ಹೆಗಡೆ, ರಾಘವೇಂದ್ರ ಹೆಗಡೆ, ಶಿವಾನಂದ ಕೋಟ, ರಾಕೇಶ ಮಲ್ಯ ಸಾಥ್ ನೀಡುತ್ತಿದ್ದಾರೆ. ಕಾರ್ಯಕ್ರಮ ನಿರ್ವಹಣೆಯಲ್ಲಿ ವಿಷ್ಣುಮೂರ್ತಿ ನಾಯಕ್, ಬೇಳೂರು ಇವರು ಭಾಗವಹಿಸುತ್ತಿದ್ದಾರೆ.