ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಪಿಚ್‌ ಗುಟ್ಟು ರಟ್ಟಾಗಿಸಿದ ಟಿಣ್‌ ಟಿಣ್‌...

Last Updated 12 ಅಕ್ಟೋಬರ್ 2020, 2:24 IST
ಅಕ್ಷರ ಗಾತ್ರ


ಕ್ರಿಕೆಟ್ ಪಿಚ್ ಗುಣಮಟ್ಟ ಅರಿಯಲು ಈಗ ತಂತ್ರಜ್ಞಾನವಿದೆ. ಆದರೆ ದಶಗಳ ಹಿಂದೆ ಜಿ. ಕಸ್ತೂರಿರಂಗನ್ ಏನ್‌ ಮಾಡ್ತಿದ್ದರು ಗೊತ್ತಾ? ನಾಣ್ಯದ ಟಿಣ್ ಟಿಣ್ ಸದ್ದಿನಿಂದಲೇ ಪಿಚ್ ಮರ್ಮ ಅರಿಯುತ್ತಿದ್ದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವಿರುವ ಜಾಗ ಒಂದುಕಾಲದಲ್ಲಿ ಕಲ್ಲುಬಂಡೆಗಳ ತಾಣವಾಗಿತ್ತಂತೆ. 51 ವರ್ಷಗಳ ಹಿಂದೆ  ಚಿನ್ನಸ್ವಾಮಿ ಅವರು ಇಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯಕ್ಕೆ ಕೈಹಾಕಿದಾಗ, ಪಿಚ್‌ ಸಿದ್ಧಗೊಳಿಸಲು ಜಿ.ಕಸ್ತೂರಿರಂಗನ್ ಅವರಿಗೆ ಹೊಣೆ ನೀಡಿದರು. ಗುಲಾಬಿ ಕೃಷಿಯಲ್ಲಿ ಸಿದ್ಧಹಸ್ತರಾಗಿದ್ದ ಕಸ್ತೂರಿರಂಗನ್ ಅವರಿಗೆ ಮಣ್ಣಿನ ಕಣಕಣದ ಪರಿಚಯ ಇತ್ತು. ಕಲ್ಲುಬಂಡೆಗಳನ್ನು ಪುಡಿಗಟ್ಟಿಸಿ ಸುಂದರವಾದ ಪಿಚ್ ನಿರ್ಮಾಣ ಮಾಡಿದರು. ಭಾರತದಲ್ಲಿ ಪಿಚ್ ಕ್ಯುರೇಟರ್‌ ಪರಂಪರೆಯನ್ನು ಆರಂಭಿಸಿದರು. ಮೈಸೂರು ರಾಜ್ಯ ತಂಡಕ್ಕೆ ಆಡಿದ್ದ ಕಸ್ತೂರಿರಂಗನ್ ಅವರು ಪಿಚ್‌ ಸಿದ್ಧತೆಯಲ್ಲಿಯೂ ತಮ್ಮದೇ ಛಾಪು ಮೂಡಿಸಿದರು. ಅವರ ಶಿಷ್ಯವರ್ಗವೇ ಇವತ್ತು ಭಾರತದ ಪ್ರಮುಖ ಕ್ರೀಡಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿದೆ.  ಈ ದಿನ ಅವರ 90ನೇ ಜನುಮದಿನ ಅವರು ಪಿಚ್‌ ಗುಣಮಟ್ಟ ಪರೀಕ್ಷಿಸಲು ಬಳಸುತ್ತಿದ್ದ ವಿಶಿಷ್ಟ ಟೆಕ್ನಿಕ್ ಒಂದರ ಕುರಿತ ಮಾಹಿತಿಯನ್ನು ಪ್ರಜಾವಾಣಿ ಕ್ರೀಡಾ ವಿಭಾಗದ ಮುಖ್ಯ ವರದಿಗಾರ ಗಿರೀಶ ದೊಡ್ಡಮನಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT