ಶನಿವಾರ, ಆಗಸ್ಟ್ 8, 2020
28 °C

ಕೊರೊನಾ ಜಯಿಸೋಣ | ಕೋವಿಡ್ ಎದುರಿಸಲು ನಡವಳಿಕೆ ಬದಲಾಯಿಸುವುದೇ ಈಗಿನ 'ಲಸಿಕೆ'

ಕೋವಿಡ್‌ ಎದುರಿಸಲು ನಮಗಿರುವ ಲಸಿಕೆ ಎಂದರೆ ಅದು ‘ನಮ್ಮ ನಡವಳಿಕೆ’.ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವುದನ್ನು ಕಲಿಯಬೇಕು. ಸೀಮಿತ ಅವಶ್ಯಕತೆಗಳಿಗೆ ತಕ್ಕಂತೆ ಜೀವನ ಶೈಲಿಯನ್ನೂ ‌ಬದಲಾಯಿಸಿಕೊಳ್ಳಲು ಮನುಷ್ಯ ಮುಂದಾಗಿದ್ದಾನೆ. ಹೀಗಾಗಿ, ಕೋವಿಡ್‌ ನಮ್ಮ ಸಾಮಾಜಿಕ ಆರೋಗ್ಯದ ದಿಕ್ಸೂಚಿಯನ್ನೇ ಬದಲಾಯಿಸಿದೆ ಎನ್ನುತ್ತಾರೆ ಡಾ.ಬಿ.ಎನ್‌. ರವೀಶ್‌, ‍ಮುಖ್ಯಸ್ಥರು, ಮನೋವೈದ್ಯ ವಿಭಾಗ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ, ಮೈಸೂರು.