ಗುರುವಾರ , ಸೆಪ್ಟೆಂಬರ್ 23, 2021
27 °C

ವಾರೆಂಟ್ ನೀಡಲು ಬಂದ ಪೊಲೀಸರೊಂದಿಗೆ ಮಾಜಿ ಶಾಸಕ ಕಾಶಪ್ಪನವರ ವಾಗ್ವಾದ

ಬಾಗಲಕೋಟೆ: ಅಕ್ಕಪಕ್ಕದ ಮನೆಯವರು ನೀಡಿದ್ದ ದೂರಿನ ಬಗ್ಗೆ ಪರಿಶೀಲನೆಗೆ ಹಾಗೂ ಹಳೆಯ ಪ್ರಕರಣವೊಂದರ ವಾರೆಂಟ್ ಜಾರಿ ಮಾಡಲು ಇಳಕಲ್‌ನ ತಮ್ಮ ನಿವಾಸಕ್ಕೆ ಬಂದ ಪೋಲಿಸರೊಂದಿಗೆ ಶನಿವಾರ ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಾಗ್ವಾದ ನಡೆಸಿದ್ದಾರೆ.

ಆ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹುನಗುಂದದ ವೃತ್ತ ನಿರೀಕ್ಷಕ ಹೊಸಕೇರಪ್ಪ, ನಗರ ಠಾಣೆ ಸಬ್ಇನ್ಸ್ಪೆಕ್ಟರ್ ಎಸ್.ಬಿ.ಪಾಟೀಲ, ಗ್ರಾಮೀಣ ಠಾಣೆ ಸಬ್ಇನ್‌ಸ್ಪೆಕ್ಟರ್‌ ಬಸವರಾಜ ತಿಪ್ಪಾರಡ್ಡಿ ತಂಡ ಕಾಶಪ್ಪನವರ ನಿವಾಸಕ್ಕೆ ತೆರಳಿತ್ತು.