ಗುರುವಾರ , ಆಗಸ್ಟ್ 5, 2021
22 °C

ಅಮ್ಮನ ಜೊತೆ ಯೋಗ ಮಾಡಿದ 3 ವರ್ಷದ ಮಗು

ದಾವಣಗೆರೆ: ಯೋಗ ದಿನಾಚರಣೆಯ ಪ್ರಯುಕ್ತ ಇಲ್ಲಿನ ಜಿಎಂಐಟಿ ಆವರಣದಲ್ಲಿ ಮೂರು ವರ್ಷದ ಬಾಲಕಿ ಆನ್ಯಾ ಯೋಗ ಮಾಡುವ ಮೂಲಕ ಗಮನ ಸೆಳೆದಳು.

ತಾಯಿ ಚೈತ್ರಾ ಅವರು ಬಾಲಕಿಗೆ ಯೋಗ ಹೇಳಿಕೊಡುತ್ತಿದ್ದರು. ಬಾಲಕಿ ವಿವಿಧ ಭಂಗಿಗಳಲ್ಲಿ ಯೋಗ ಮಾಡುತ್ತಿದ್ದುದ್ದನ್ನು ನೋಡಿ ಅಲ್ಲಿದ್ದವರು ಖುಷಿಪಟ್ಟರು.

ದಾವಣಗೆರೆಯ ಓಂಕಾರಪ್ಪ ಅವರ ಮಗಳು ಚೈತ್ರಾ ಅವರು ಸಾಫ್ಟ್‌ ವೇರ್  ಎಂಜಿನಿಯರ್‌ ಆಗಿದ್ದು, ಅವರು ಯೋಗದಲ್ಲಿ ಎರಡು ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಈಗ ಬೆಂಗಳೂರಿನಲ್ಲಿ ಮಗಳಿಗೂ ಯೋಗ ಹೇಳಿಕೊಡುತ್ತಿದ್ದಾರೆ.