ಶನಿವಾರ, ಜೂನ್ 19, 2021
28 °C

ಬೆಳೆದವರಿಂದಲೇ ಕಲ್ಲಂಗಡಿ ಬೆಳೆ ನಾಶ!

ರಾಜ್ಯದ ಕರಾವಳಿಯಲ್ಲಿ ಮೇ 15ರಂದು ಹಾದು ಹೋಗಿದ್ದ ‘ತೌತೆ’ ಚಂಡಮಾರುತದ ಪರಿಣಾಮಗಳು ಈಗಲೂ ಮುಂದುವರಿದಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹತ್ತಾರು ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ಗದ್ದೆಯಲ್ಲೇ ಕೊಳೆಯುತ್ತಿವೆ. ಫಸಲು ಇನ್ನೇನು ಕಟಾವಾಗಿ ಕೈ ಸೇರುವ ದಿನವಾಯ್ತು ಎನ್ನುವಷ್ಟರಲ್ಲಿ ಚಂಡಮಾರುತ ಅಬ್ಬರಿಸಿತು. ಸಮೀಪದಲ್ಲಿರುವ ಸಮುದ್ರದ ಉಪ್ಪು ನೀರು ಮರಳು ಮಿಶ್ರಿತ ಮಣ್ಣಿನ ಮೂಲಕ ಗದ್ದೆಗೂ ಬಂತು. ಇದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಕಲ್ಲಂಗಡಿ ಕೃಷಿಗೆ ಮಾರಕವಾಯಿತು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp