ಗುರುವಾರ , ಫೆಬ್ರವರಿ 25, 2021
28 °C

ನೋಡಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಧವನ್–ನತಾಶಾ

ಬಾಲಿವುಡ್ ನಟ ವರುಣ್ ಧವನ್ ಅವರು ತಮ್ಮ ಬಹುದಿನಗಳ ಗೆಳತಿ, ಫ್ಯಾಶನ್ ಡಿಸೈನರ್ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಭಾನುವಾರ ಸಂಜೆ ಮುಂಬೈ ಅಲಿಬಾಗ್‌ನ ಐಷಾರಾಮಿ ರೆಸಾರ್ಟ್ ‘ದಿ ಮ್ಯಾನ್ಷನ್ ಹೌಸ್‌’ನಲ್ಲಿ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹ ನಡೆದಿದೆ. 33 ವರ್ಷದ ನಟ ವರುಣ್ ಧವನ್ ಇನ್‌ಸ್ಟಾಗ್ರಾಮ್‌ನಲ್ಲಿ ವಿವಾಹದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. "ಲೈಫ್ ಲಾಂಗ್ ಲವ್ ಇದೀಗ ಅಧಿಕೃತವಾಯಿತು," ಎಂದು ಚಿತ್ರಗಳಿಗೆ ಶೀರ್ಷಿಕೆ ನೀಡಿದ್ದಾರೆ.