ಶನಿವಾರ, ಅಕ್ಟೋಬರ್ 16, 2021
22 °C

Watch: ಬೇಬಿಕಾರ್ನ್ ಮಂಚೂರಿಯನ್‌ ಮಾಡುವ ವಿಧಾನ

ಬೇಬಿಕಾರ್ನ್ ಮಂಚೂರಿಯನ್‌

ಬೇಕಾಗುವ ಸಾಮಗ್ರಿಗಳು: ಬೇಬಿಕಾರ್ನ್ – 200 ಗ್ರಾಂ, ಕಾರ್ನ್‌ಫ್ಲೋರ್‌ – ಕಾಲು ಕಪ್‌, ಮೈದಾ – ಕಾಲು ಕಪ್‌, ಖಾರದಪುಡಿ – 1 ಟೀ ಚಮಚ, ಉಪ್ಪು – ರುಚಿಗೆ, ಟೊಮೆಟೊ ಸಾಸ್‌ – 3 ಚಮಚ, ವಿನೆಗರ್‌ – 1 ಚಮಚ, ಚಿಲ್ಲಿ ಸಾಸ್‌ – 1 ಚಮಚ, ಸೋಯಾ ಸಾಸ್‌ – 2 ಚಮಚ, ಈರುಳ್ಳಿ – 2 ಸಣ್ಣಗೆ ಹೆಚ್ಚಿದ್ದು, ಕಾಳುಮೆಣಸಿನ ಪುಡಿ – 1 ಚಮಚ, ಶುಂಠಿ – 1 ಚಮಚ, ಬೆಳ್ಳುಳ್ಳಿ – 1 ಚಮಚ, ಹಸಿಮೆಣಸು – 1, ಕ್ಯಾಪ್ಸಿಕಂ – 1, ಎಣ್ಣೆ – ಕರಿಯಲು

ತಯಾರಿಸುವ ವಿಧಾನ: ಮೊದಲು ಸ್ವಚ್ಛ ಮಾಡಿಟ್ಟುಕೊಂಡ ಬೇಬಿಕಾರ್ನ್‌ ಅನ್ನು ಕತ್ತರಿಸಿಕೊಳ್ಳಿ. ಕಪ್‌ವೊಂದಕ್ಕೆ ಕಾರ್ನ್‌ಫ್ಲೋರ್‌, ಮೈದಾ, ಖಾರದಪುಡಿ, ಉಪ್ಪನ್ನು ಸೇರಿ ಚೆನ್ನಾಗಿ ಕಲೆಸಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಈ ಹಿಟ್ಟು ಅತಿ ದಪ್ಪವೂ ಇರಬಾರದು, ತೆಳ್ಳಗೂ ಇರಬಾರದು. ಇದಕ್ಕೆ ಕತ್ತರಿಸಿಕೊಂಡ ಬೇಬಿಕಾರ್ನ್ ಸೇರಿಸಿ ಚೆನ್ನಾಗಿ ಕಲೆಸಿ. ಎಣ್ಣೆ ಕಾಯಲು ಇಟ್ಟು ಬಿಸಿಯಾದ ಮೇಲೆ ಬೇಬಿಕಾರ್ನ್‌ ಹಾಕಿ ಹೊಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ಪ್ಯಾನ್‌ವೊಂದರಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಶುಂಠಿ–ಬೆಳ್ಳುಳ್ಳಿ ಹಾಕಿ ಕೈಯಾಡಿಸಿ, ಅದಕ್ಕೆ ಈರುಳ್ಳಿ, ಹಸಿಮೆಣಸು ಸೇರಿಸಿ ದೊಡ್ಡ ಉರಿಯಲ್ಲಿ ಅರ್ಧ ನಿಮಿಷ ಹುರಿದುಕೊಳ್ಳಿ. ಅದಕ್ಕೆ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಸಾಸ್‌, ವಿನೆಗರ್‌, ಕಾಳುಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ನಂತರ ಸ್ಟೌವ್‌ ಉರಿ ಜಾಸ್ತಿ ಮಾಡಿಕೊಂಡು ಬೇಬಿಕಾರ್ನ್‌ ಸೇರಿಸಿ ಚೆನ್ನಾಗಿ ಕೈಯಾಡಿಸಿ.

ಲೇಖಕಿ: ‘ವೈಷ್ಣವಿ ಚಾನೆಲ್’ ಯೂಟ್ಯೂಬ್ ಚಾನೆಲ್‌ನ ನಿರ್ವಾಹಕಿ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...