ಬುಧವಾರ, ಜುಲೈ 28, 2021
21 °C

Recipe-Egg Special| ಮೊಟ್ಟೆ ದೋಸೆ

ದೋಸೆ ಹಿಟ್ಟು, ಮೊಟ್ಟೆ ಮಿಶ್ರಣದ ಎಗ್ ದೋಸೆ ಸಂಜೆ ಹೊತ್ತಿಗೆ ತಿನ್ನಲು ಚೆನ್ನಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 2, ಉಪ್ಪು – ರುಚಿಗೆ ತಕ್ಕಷ್ಟು, ಖಾರದಪುಡಿ – ಕಾಲು ಚಮಚ, ಕಾಳುಮೆಣಸಿನ ಪುಡಿ – ಕಾಲು ಚಮಚ, ಈರುಳ್ಳಿ – 1 ಸಣ್ಣಗೆ ಹೆಚ್ಚಿದ್ದು, ಬೆಣ್ಣೆ – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ, ದೋಸೆ ಹಿಟ್ಟು – 2 ಕಪ್‌

ತಯಾರಿಸುವ ವಿಧಾನ: ಕಪ್‌ನಲ್ಲಿ ಮೊಟ್ಟೆ ಒಡೆದು ಹಾಕಿ, ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ನೊರೆ ಬರುವವರೆಗೂ ಕಲೆಸಿ. ನಂತರ ಒಂದು ತವಾವನ್ನು ಬಿಸಿ ಮಾಡಿ ಮಧ್ಯಮ ಉರಿಯಲ್ಲಿ ಇರಿಸಿಕೊಂಡು ಅಗಲವಾದ ದೋಸೆ ಹಾಕಿ. ದೋಸೆ ದಪ್ಪವಾಗಿರಲಿ, ದೋಸೆ ಹಾಕಿದ ಕೂಡಲೇ ಅದರ ಮೇಲೆ ತುಪ್ಪ‍ ಚಿಮುಕಿಸಿ. ದೋಸೆ ಮೇಲೆ ಮೊಟ್ಟೆ ಹಾಕಿ ಅದರ ಮೇಲೆ ಖಾರದ ಪುಡಿ ಚಿಮುಕಿಸಿ. ನಂತರ ಮುಚ್ಚಿ ಅರ್ಧ ನಿಮಿಷ ಬೇಯಿಸಿ. ನಂತರ ಮೇಲೆ ಬೆಣ್ಣೆಯ ತುಂಡುಗಳನ್ನು ಇರಿಸಿ. ಕರಗಿದ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ಈರುಳ್ಳಿ ಹಾಕಿ. ಒಂದು ನಿಮಿಷ ಹಾಗೇ ಇರಿಸಿ, ನಂತರ ತೆಗೆದು ಸಾಂಬಾರ್ ಅಥವಾ ಚಟ್ನಿ ಜೊತೆ ತಿನ್ನಲು ಕೊಡಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp