ಶನಿವಾರ, ಸೆಪ್ಟೆಂಬರ್ 19, 2020
22 °C

ಶಿರಪುರ ಮಾದರಿ ಯಶಸ್ವಿ: ಭರಪೂರ ಅಂತರ್ಜಲ ಸಂಗ್ರಹ

ಬಿಸಿಲಿನ ನಾಡು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆರಂಭಿಸಿದ ಅಂತರ್ಜಲ ವೃದ್ಧಿಯ ಪ್ರಯೋಗಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ. ಬಾವಿ, ಕೊಳವೆಬಾವಿಗಳಲ್ಲಿ ಭರಪೂರ ನೀರು ಉಕ್ಕಿದೆ. 56 ಕಿ.ಮೀ. ವ್ಯಾಪ್ತಿಯ ನೈಸರ್ಗಿಕ ಹಳ್ಳಗಳಿಗೆ 50 ಚೆಕ್ ಡ್ಯಾಂ ನಿರ್ಮಿಸುವ ಈ ಯೋಜನೆಗೆ ತಗುಲಿದ್ದು ಕೇವಲ 20 ಕೋಟಿ ರೂಪಾಯಿ.