ಗುರುವಾರ , ನವೆಂಬರ್ 26, 2020
20 °C

Video: ಮೂರು ಗಂಟೆಗಳ ಮಳೆಗೆ ಮುಳುಗಿದ ಬೆಂಗಳೂರು

ಬೆಂಗಳೂರು ನಗರದಲ್ಲಿ ಶುಕ್ರವಾರ ಜೋರು ಮಳೆ ಆಗುತ್ತಿದ್ದು, ಬಹುತೇಕ ಪ್ರದೇಶಗಳಲ್ಲಿ ವರುಣ ಅರ್ಭಟಿಸಿ ಸುರಿಯುತ್ತಿದ್ದಾನೆ. ರಾಜಾಜಿನಗರ, ವಿಜಯನಗರ, ಯಶವಂತಪುರ, ಪೀಣ್ಯ, ಶಾಂತಿನಗರ, ಮೆಜೆಸ್ಟಿಕ್, ಗಾಂಧಿನಗರ, ಬಸವನಗುಡಿ, ಆರ್.ಟಿ.ನಗರ, ಹೆಬ್ಬಾಳ, ಮಡಿವಾಳ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ, ಕೆಂಗೇರಿ ಹಾಗೂ ಸುತ್ತಮುತ್ತ ಮಳೆ ಜೋರಾಗಿದೆ. ಮಧ್ಯಾಹ್ನ ಹಲವೆಡೆ ಜೋರಾಗಿ ಮಳೆ ಆರಂಭವಾಗಿದೆ. ಸಂಜೆಯೂ ಮಳೆ ಪ್ರಮಾಣ ಹೆಚ್ಚಿದ್ದರಿಂದ, ಪ್ರಮುಖ ರಸ್ತೆಗಳಲ್ಲಿ ನೀರು ಹರಿಯಿತು.

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani