ಬುಧವಾರ, ಜೂನ್ 16, 2021
23 °C

ನೋಡಿ: ಕೊಳವೆ ಬಾವಿಗೆ ಬಿದ್ದ 4 ವರ್ಷದ ಮಗು: ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಜೈಪುರ: 4 ವರ್ಷದ ಮಗು ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ರಾಜಸ್ಥಾನದ ಜಲೋರ್‌ನಲ್ಲಿ ನಡೆದಿದೆ. ಸಂಚೋರ್ ಪಟ್ಟಣದ ಲಚ್ಚಡಿ ಹಳ್ಳಿಯಲ್ಲಿ ಹೊಸದಾಗಿ ತೆಗೆಸಲಾಗಿದ್ದ 90 ಅಡಿಯ ಕೊಳವೆ ಬಾವಿ ನೀರು ಬರದ ವಿಫಲವಾಗಿತ್ತು. ಆದರೆ, ತೋಡಿದ್ದ ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೇ ಬಿಡಲಾಗಿತ್ತು. ಕೊಳವೆ ಬಾವಿ ಸಮೀಪದಲ್ಲೇ ಆಟವಾಡುತ್ತಿದ್ದ ಮಗು ಅಚಾನಕ್ಕಾಗಿ ಕೊಳವೆ ಬಾವಿಗೆ ಬಿದ್ದಿದೆ. ಎಸ್‌ಡಿಆರ್‌ಎಫ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೊಳವೆ ಬಾವಿಯೊಳಗೆ ಕ್ಯಾಮೆರಾ ಬಿಟ್ಟಿರುವ ಅಧಿಕಾರಿಗಳು ಮಗುವಿನ ಚಲನವಲನವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈವರೆಗೆ ಮಗು ಸುರಕ್ಷಿತವಾಗಿದೆ ಎಂಬ ಮಾಹಿತಿ ಸಿಕ್ಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.