ಮಂಗಳವಾರ, ಏಪ್ರಿಲ್ 20, 2021
27 °C

VIDEO: ಕೇರಳದ ಮೀನುಗಾರರ ಜೊತೆ ಈಜಿದ ರಾಹುಲ್ ಗಾಂಧಿ: ಕೊಲ್ಲಂ ಕಡಲಲ್ಲಿ ಕಾಂಗ್ರೆಸ್ ಮುಖಂಡ

ಕೊಲ್ಲಂ: ಇತ್ತೀಚೆಗೆ ತಮಿಳುನಾಡಿನ ವಿಲೇಜ್ ಫುಡ್ ಯೂಟ್ಯೂಬ್ ಚಾನಲ್‌ನಲ್ಲಿ ಕಾಣಿಸಿಕೊಂಡು ಬಿರಿಯಾನಿ ಸವಿದಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನಿನ್ನೆ ಕೇರಳದ ಮೀನುಗಾರರ ಜೊತೆ ಈಜಿ ಸಂಭ್ರಮಿಸಿದ್ದಾರೆ. ಕೊಲ್ಲಂ ಬಳಿಯ ಸಮುದ್ರದಲ್ಲಿ ಮೀನುಗಾರರ ಜೊತೆ ಈಜಿದ ಕಾಂಗ್ರೆಸ್ ಮುಖಂಡ ಮೀನನ್ನು ಸಹ ಹಿಡಿದಿದ್ದಾರೆ. ಕೆಲವೆ ತಿಂಗಳಲ್ಲಿ ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಹುಲ್ ಗಾಂಧಿ ಭೇಟಿ ಮಹತ್ವ ಪಡೆದುಕೊಂಡಿದೆ.