ಸೋಮವಾರ, ಏಪ್ರಿಲ್ 19, 2021
23 °C

Video: ತಮಿಳುನಾಡು ಚುನಾವಣೆ: ಎಂ.ಕೆ. ಸ್ಟಾಲಿನ್, ಕಾಂಗ್ರೆಸ್ ಮುಖಂಡ ಚಿದಂಬರಂ ಮತದಾನ

ಚೆನ್ನೈ: ಪತ್ನಿ ದುರ್ಗಾ ಸ್ಟಾಲಿನ್ ಮತ್ತು ಪುತ್ರ ಉದಯ್ ಜೊತೆ ಆಗಮಿಸಿದ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಮತದಾನ ಮಾಡಿದರು. ಶಿವಗಂಗಾ ಜಿಲ್ಲೆಯ ಕಂದನೂರಿನಲ್ಲಿರುವ ಚಿತ್ತಲ್ ಅಚಿ ಸ್ಮಾರಕ ಪ್ರೌ ಢಶಾಲೆಯ ಮತಕೇಂದ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮತ ಚಲಾಯಿಸಿದ್ದಾರೆ. ಇದೇವೇಳೆ, ಮಾತನಾಡಿದ ಅವರು, ‘ನಮ್ಮ ಜಾತ್ಯತೀತ, ಪ್ರಗತಿಪರ ಮೈತ್ರಿಕೂಟವು ಭರ್ಜರಿ ಗೆಲುವಿಗೆ ಸಜ್ಜಾಗಿದೆ. ಏಕೆಂದರೆ, ತಮಿಳುನಾಡಿನ ಜನರು ಬದಲಾವಣೆಯನ್ನು ಬಯಸುತ್ತಾರೆ’ ಎಂದು ಅವರು ಹೇಳಿದ್ದಾರೆ.