ಶನಿವಾರ, ಅಕ್ಟೋಬರ್ 16, 2021
22 °C

ಸಿಸಿಟಿವಿ ವಿಡಿಯೊ: ಮುಂಬೈ– ರೈಲಿನಲ್ಲಿ ಸಿಲುಕುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಪ್ರಯಾಣಿಕ

ಮುಂಬೈ: ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿಗೆ ಈ ಘಟನೆ ಸರಿಯಾಗಿಯೇ ಹೋಲಿಕೆಯಾಗುತ್ತೆ. ತರಾತುರಿಯಲ್ಲಿ ಚಲಿಸುತ್ತಿದ್ದ ರೈಲು ಹತ್ತಲು ಹೋದ ಮಹಿಳೆ ಆಯತಪ್ಪಿ ರೈಲಿನ ಕೆಳಗೆ ಸಿಲುಕುವ ಸಂದರ್ಭ ಸೃಷ್ಟಿಯಾಗಿತ್ತು. ಕೂಡಲೇ ಸ್ಥಳದಲ್ಲಿದ್ದ ಪ್ರಯಾಣಿಕರ ಸಮಯೋಚಿತ ಪ್ರಯತ್ನದಿಂದ ಅವಗಡ ತಪ್ಪಿದೆ. ಮುಂಬೈನ ವಸೈ ರೈಲು ನಿಲ್ದಾಣದಲ್ಲಿ ನಡೆದ ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ.