ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO: ಹಳದಿ ಕಲ್ಲಂಗಡಿ ನೋಡಿದ್ರಾ? ಲಕ್ಷ ಲಕ್ಷ ಜೇಬಿಗಿಳಿಸುತ್ತಿದ್ದಾರೆ ಈ ಕಲಬುರ್ಗಿ ರೈತ

Last Updated 24 ಫೆಬ್ರುವರಿ 2021, 5:41 IST
ಅಕ್ಷರ ಗಾತ್ರ

ಕಲಬುರ್ಗಿ: ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬೆಡಿಕೆ ಹೆಚ್ಚು. ನಾವೆಲ್ಲರೂ ಸಾಮಾನ್ಯವಾಗಿ ಕೆಂಪು ತಿರುಳಿನ ಕಲ್ಲಂಗಡಿ ಹಣ್ಣು ನೋಡಿರುತ್ತೇವೆ. ಆಸದರೆ, ಕಲಬುರಗಗಿಯ ರೈತರೊಬ್ಬರು ಹಳದಿ ತಿರುಳಿನ ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಕೊರಳ್ಳಿ ಗ್ರಾಮದ ಪದವೀಧರ ರೈತ ಬಸವರಾಜ್ ಪಾಟೀಲ್ ತಮ್ಮ ತೋಟದಲ್ಲಿ ಹಳದಿ ಕಲ್ಲಂಗಡಿ ಹಣ್ಣು ಬೆಳೆದಿದ್ದಾರೆ ನಗರ, ಬಿಗ್ ಬಜಾರ್‌ ಮತ್ತು ಮಾರ್ಟ್‌ಗಳಲ್ಲಿ ಹಣ್ಣನ್ನು ಮಾರಿ ಇದುವರೆಗ ₹ 1 ಲಕ್ಷ ಆದಾಯ ಗಳಿಸಿದ್ದೇನೆ ಎನ್ನುತ್ತಾರೆ ರೈತ ಬಸವರಾಜ್ ಪಾಟೀಲ್. ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿ ಜರ್ಮನಿಯಿಂದ ಬೀಜಗಳನ್ನು ತರಿಸಿ ಹಳದಿ ಕಲ್ಲಂಗಡಿ ಬೆಳೆದಿದ್ದಾರೆ. ಈ ಹಣ್ಣು ಸಾಮಾನ್ಯ ಕೆಂಪು ತಿರಳಿನ ಕಲ್ಲಂಗಡಿ ಹಣ್ಣಿಗಿಂತ ಹೆಚ್ಚು ರುಚಿಯಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಹಳದಿ ಕಲ್ಲಂಗಡಿ ಉಪಯುಕ್ತವಾಗಿರುವುದರಿಂದ ಬೇಡಿಕೆ ಹೆಚ್ಚಿದೆ. 1 ಟನ್ ಹಳದಿ ಕಲ್ಲಂಗಡಿ ₹ 15 ಸಾವಿರದವರೆಗೆ ಮಾರಾಟವಾಗುತ್ತದೆ. ಕೆಂಪು ಕಲ್ಲಂಗಡಿ ಟನ್ ₹ 5 ರಿಂದ ₹ 7 ಸಾವಿರಕ್ಕೆ ಮಾರಾಟವಾಗುತ್ತವೆ.ರೈತರು ಕೃಷಿಯಲ್ಲಿ ನಷ್ಟದಿಂದ ಹೊರಬರಲು ಬೆಲೆಗಳಲ್ಲಿ ವೈವಿಧ್ಯತೆ ಕಂಡುಕೊಳ್ಳಬೇಕು: ರೈತ ಬಸವರಾಜ ಪಾಟೀಲ್ಆಫ್ರಿಕಾ ಖಂಡಗಳಲ್ಲಿ ಬೆಳೆಯುವ ಹಳದಿ ಕಲ್ಲಂಗಡಿ ಹಣ್ಣು, ಕಲಬುರ್ಗಿಯಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ಉತ್ತಮ ಫಸಲು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT