ಬುಧವಾರ, ಜೂನ್ 29, 2022
24 °C

Video | ರಾಜ್ಯದಲ್ಲಿ ಯೋಗ ‘ಪರಂಪರೆ’ ಪ್ರದರ್ಶನ

ರಾಜ್ಯದೆಲ್ಲೆಡೆ ಮಂಗಳವಾರ ಯೋಗ ಉತ್ಸವದ ಸಂಭ್ರಮ ಮನೆ ಮಾಡಿತ್ತು. ರಾಜ್ಯದ ಪಾರಂಪರಿಕ ತಾಣಗಳು, ಮೈಸೂರಿನ ಅಂಬಾವಿಲಾಸ ಅರಮನೆ, ದೇಗುಲಗಳ ಆವರಣ... ಯೋಗಪ್ರದರ್ಶನದ ವೇದಿಕೆಗಳಾಗಿ ಮಾರ್ಪಟ್ಟಿದ್ದವು. ಯೋಗದ ಮಹತ್ವ ಕುರಿತ ಭಾಷಣಗಳು, ಆರೋಗ್ಯದ ಬಗೆಗಿನ ಕಾಳಜಿ ಎಂದಿಗಿಂತ ಹೆಚ್ಚಾಗಿಯೇ ಕಾಣಿಸುತ್ತಿತ್ತು. 'ಮಾನವೀಯತೆಗಾಗಿ ಯೋಗ' ಘೋಷ ವಾಕ್ಯದಡಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ‌, ಸ್ವತಃ ಯೋಗ ಪ್ರದರ್ಶಿಸುವ ಮೂಲಕ ದೇಶದ ಗಮನವನ್ನು ಮೈಸೂರಿನತ್ತ ಸೆಳೆದರು.