ಶನಿವಾರ, ಜೂನ್ 25, 2022
21 °C

ರಾಷ್ಟ್ರೀಯ ತೋಟಗಾರಿಕೆ ಮೇಳ – 2020

ಬೆಂಗಳೂರಿನ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ಆವರಣದಲ್ಲಿ ಇದೇ ಫೆ.5 ರಿಂದ 8ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳ ಆಯೋಜಿಸಲಾಗಿದೆ.

‘ಕೃಷಿಯನ್ನು ಉದ್ದಿಮೆಯನ್ನಾಗಿಸಲು ತೋಟಗಾರಿಕೆ’ ಎಂಬ ಶೀರ್ಷಿಕೆಯಡಿ ಮೇಳ ನಡೆಯುತ್ತಿದೆ. ಹಳ್ಲಿಯಿಂದ ನಗರದವರೆಗೆ ಎಲ್ಲ ವರ್ಗದವರೂ ಭೇಟಿ ನೀಡಬಹುದಾದ ಈ ಮೇಳದಲ್ಲಿ ಏನು ವೈಶಿಷ್ಟ್ಯವಿದೆ ಎಂಬುದರ ಬಗ್ಗೆ ಐಐಎಚ್‌ಆರ್‌ ನಿರ್ದೇಶಕ ಎಂ.ಆರ್‌.ದಿನೇಶ್ ಅವರೊಂದಿಗೆ ನಡೆಸಿದ ಮಾತುಕತೆಯ ಸಂಕ್ಷಿಪ್ತ ರೂಪ ಇಲ್ಲಿದೆ.