ಗುರುವಾರ , ನವೆಂಬರ್ 26, 2020
20 °C

Watch: ನವರಾತ್ರಿ: ಶಕ್ತಿಶಾರದೆಯ ಉತ್ಸವ - ಭಾಗ 9 | ಆಯುಧ ಪೂಜೆ

ನವರಾತ್ರಿ: ಇದು ನಮ್ಮ ಜೀವನದಲ್ಲಿ ನವತ್ವವನ್ನು ತುಂಬುವಂಥದು. ಪ್ರಕೃತಿಮಾತೆಯ ಶಕ್ತಿರೂಪವನ್ನು ಆರಾಧಿಸುವುದೇ ಈ ಪರ್ವದ ವಿಶೇಷ. ದುರ್ಗೋತ್ಸವ ಎಂದೂ, ‘ಶರನ್ನವರಾತ್ರ’ ಎಂದೂ ಇದಕ್ಕೆ ಹೆಸರುಂಟು. ಇದು ಒಂಬತ್ತು ದಿನಗಳ ಹಬ್ಬವಾದುದರಿಂದ ‘ನವರಾತ್ರಿ’; ಹತ್ತನೆಯ ದಿನವನ್ನು ‘ವಿಜಯದಶಮಿ’ ಎಂದು ಆಚರಿಸಲಾಗುತ್ತದೆ. ಈ ಹತ್ತು ದಿನಗಳ ಹಬ್ಬವೇ ‘ದಶಾಹ’; ಇದೇ ‘ದಸರಾ’ ಆಗಿರುವುದು. ದಸರಾ ನಮ್ಮ ನಾಡಹಬ್ಬವೂ ಹೌದು. ನಾಡಹಬ್ಬದಲ್ಲಿ ಶಕ್ತಿದೇವತೆಯನ್ನು ಚಾಮುಂಡಿಯ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಧಾರ್ಮಿಕ, ತಾತ್ತ್ವಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ತತ್ತ್ವಗಳನ್ನು ನಿರೂಪಿಸುವ ದೃಶ್ಯಸರಣಿಯೇ ‘ನವರಾತ್ರಿ: ಶಕ್ತಿಶಾರದೆಯ ಉತ್ಸವ’

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani