ಶನಿವಾರ, ಆಗಸ್ಟ್ 8, 2020
28 °C

Video| ಲಡಾಖ್‌ನಲ್ಲಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲಡಾಖ್‌ ಭೇಟಿ ನೀಡಿದ್ದಾರೆ. ಗಾಲ್ವಾನ್‌ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದು ಎರಡು ವಾರಗಳ ಬಳಿಕ ಲಡಾಕ್‌ನಲ್ಲಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಭಾರತೀಯ ವಾಯು ಪಡೆ, ಸೇನೆ ಹಾಗೂ ಇಂಡೊ–ಟಿಬೆಟನ್‌ ಗಡಿ ಪೊಲೀಸ್‌ (ಐಟಿಬಿಪಿ) ಸಿಬ್ಬಂದಿಯೊಂದಿಗೆ ಪ್ರಧಾನಿ ಮಾತುಕತೆ ನಡೆಸಿದ್ದಾರೆ. ಸಿಂಧು ನದಿ ತೀರ ಹಾಗೂ ಝಂಸ್ಕಾರ್‌ ಪರ್ವತ ಶ್ರೇಣಿಯಿಂದ ಸುತ್ತವರಿದಿರುವ ನಿಮ್ಮೊ ಪ್ರದೇಶ 11,000 ಅಡಿ ಎತ್ತರದಲ್ಲಿದೆ.