ಗುರುವಾರ , ಜೂನ್ 4, 2020
27 °C

ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ: ಮಾಹಿತಿ ನೀಡಲು ನಿರಾಕರಿಸಿದ ಯುವಕ

ಬೆಂಗಳೂರು: ಖಾಲಿ ರಸ್ತೆಯಲ್ಲಿ  ಜಾಲಿರೈಡ್ ಮಾಡುತ್ತಿದ್ದ ನಟಿ ಶರ್ಮಿಳಾ ಮಾಡ್ರೆ ಕಾರು ಅಪಘಾತವಾಗಿದ್ದು, ಶರ್ಮಿಳಾ ಅವರೂ ಗಾಯಗೊಂಡಿದ್ದಾರೆ.

ನಗರದಲ್ಲಿ ನಿಷೇಧಾಜ್ಞೆ ಇದೆ. ಇದರ ನಡುವೆಯೇ ಶರ್ಮಿಳಾ ಸ್ನೇಹಿತರ ಜೊತೆ ಜಾಗ್ವಾರ್ ಕಾರಿನಲ್ಲಿ ಶುಕ್ರವಾರ ರಾತ್ರಿ ಸುತ್ತಾಡುತ್ತಿದ್ದರು.

ವಸಂತನಗರ ಕೆಳ ಸೇತುವೆಯಲ್ಲಿ ಕಾರು ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಫಘಾತದಲ್ಲಿ ಶರ್ಮಿಳಾ ಮಂಡ್ರೆ ಮುಖಕ್ಕೆ ಗಾಯವಾಗಿದ್ದು, ಸ್ನೇಹಿತನೊಬ್ಬನ ಕೈಗೆ ಪೆಟ್ಟು ಬಿದ್ದಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.