ಗುರುವಾರ , ಜೂನ್ 4, 2020
27 °C

ಸಾರ್ವಜನಿಕರ ಮೇಲೆ ‘ಸೋಡಿಯಂ ಹೈಪೊಕ್ಲೋರೈಟ್’ ಸಿಂಪಡಿಕೆ

ಮೈಸೂರು: ಇಲ್ಲಿನ ಎಂ.ಜಿ.ರಸ್ತೆ ಮಾರುಕಟ್ಟೆಯನ್ನು ಪ್ರವೇಶಿಸುವ ಸಾರ್ವಜನಿಕರು ಹಾಗೂ ವ್ಯಾಪಾರಿಗಳ ಮೇಲೆ ‘ಸೋಡಿಯಂ ಹೈಪೊಕ್ಲೋರೈಟ್’ ದ್ರಾವಣ ಸಿಂಪಡಿಸುವ ವ್ಯವಸ್ಥೆಗೆ ಪಾಲಿಕೆ ಶುಕ್ರವಾರ ಚಾಲನೆ ನೀಡಿತು.

ಎಲ್ಲರ ಕೈಗೂ ‘ಹ್ಯಾಂಡ್ ಸ್ಯಾನಿಟೈಸರ್’ ಸಿಂಪಡಿಸುವುದು ಕಷ್ಟದ ಕೆಲಸ. ‘ಸೋಡಿಯಂ ಹೈಪೊಕ್ಲೋರೈಟ್’ ದ್ರಾವಣದಿಂದ ಅಡ್ಡಪರಿಣಾಮಗಳು ಆಗುವುದಿಲ್ಲ. ಬರುವಾಗ ಸುಮಾರು 6 ಸೆಕೆಂಡುಗಳ ಕಾಲ ಕೈಗಳನ್ನು ಮೇಲೆತ್ತಿ ಬಂದರೆ ಸಾಕು, ಕೈಗಳು ಸ್ವಚ್ಛವಾಗುತ್ತದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ.

ಎಲ್ಲ 7 ತರಕಾರಿ ಮಾರುಕಟ್ಟೆಗಳಲ್ಲೂ ಇದನ್ನು ಅಳವಡಿಸಲು ಪಾಲಿಕೆ ಚಿಂತನೆ ನಡೆಸಿದೆ.