ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವನಿರ್ದೇಶಕನ ಸಿನಿಮಾಗೆ ಹಣ ಹೂಡಲಿದ್ದಾರೆ ಯೋಗರಾಜ್‌ ಭಟ್‌–ಶಶಾಂಕ್‌

Last Updated 18 ಫೆಬ್ರುವರಿ 2019, 11:33 IST
ಅಕ್ಷರ ಗಾತ್ರ

ನಿರ್ದೇಶಕರಾದ ಯೋಗರಾಜ್‌ ಭಟ್‌ ಹಾಗೂ ಶಶಾಂಕ್‌ ಅವರು ಒಟ್ಟಿಗೆ ಸೇರಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಅವರು ಪ್ರೇಮಿಗಳ ದಿನದಂದು ಮಾತನಾಡಿರುವ ವಿಡಿಯೊ ಪ್ರಜಾವಾಣಿಗೆ ಲಭ್ಯವಾಗಿದೆ.

ಕೆಲದಿನಗಳ ಹಿಂದೆ ಯೋಗರಾಜ ಭಟ್ಟರು ಹೇಳಿದ್ದ ಸಾಲೊಂದನ್ನು ಕೇಳಿ ಇಂಪ್ರೆಸ್‌ ಆಗಿದ್ದ ನಟ ರಿಷಿ, ನಿರ್ದೇಶಕ ಶಶಾಂಕ್‌ ಅವರಿಗೆ ಕಥೆ ಹೇಳಿದ್ದರು. ಆ ಕಥೆ ಈಗ ಸಿನಿಮಾ ಆಗುತ್ತಿದೆ. ಈ ಸಿನಿಮಾಗೆ ಹಣ ಹೂಡಲು ಯೋಗರಾಜ್‌ ಸಿನಿಮಾಸ್‌ ಹಾಗೂ ಶಶಾಂಕ್‌ ಸಿನಿಮಾಸ್‌ ಪ್ರೊಡಕ್ಷನ್‌ ಹೌಸ್‌ಗಳು ಒಂದಾಗುತ್ತಿವೆ. ಅಂದಹಾಗೆ ಬೇರೊಬ್ಬರು ನಿರ್ದೇಶಿಸುತ್ತಿರುವ ಸಿನಿಮಾವೊಂದಕ್ಕೆ ಇವರಿಬ್ಬರು ಹಣ ಹಾಕುತ್ತಿರುವುದೂ ಇದೇ ಮೊದಲು.

ಹಲವು ಧಾರಾವಾಹಿಗಳಲ್ಲಿ ಹಾಗೂ ಭಟ್ಟರೊಂದಿಗೆ ಕೆಲವು ವರ್ಷಗಳಿಂದ ಕೆಲಸ ಮಾಡಿರುವ ಮೋಹನ್‌ ಸಿಂಗ್‌ ಈ ಸಿನಿಮಾ ಮೂಲಕ ನಿರ್ದೇಶನ ಕ್ಯಾಪ್‌ ಧರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT