ವಿಜಯಪುರ ಜಿಲ್ಲೆಯ ಪಿಯು ಫಲಿತಾಂಶ ಶೇ 68.55: ದಶಕದಲ್ಲಿ ನೂತನ ದಾಖಲೆ ನಿರ್ಮಾಣ..!

ಶುಕ್ರವಾರ, ಏಪ್ರಿಲ್ 19, 2019
22 °C
ದ್ವಿತೀಯ ಪಿಯುಸಿ ಪರೀಕ್ಷೆ

ವಿಜಯಪುರ ಜಿಲ್ಲೆಯ ಪಿಯು ಫಲಿತಾಂಶ ಶೇ 68.55: ದಶಕದಲ್ಲಿ ನೂತನ ದಾಖಲೆ ನಿರ್ಮಾಣ..!

Published:
Updated:
Prajavani

ವಿಜಯಪುರ: 2018–19ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ದಶಕದ ಅವಧಿಯಲ್ಲಿನ ಫಲಿತಾಂಶವನ್ನು ಅವಲೋಕಿಸಿದರೆ; ಈ ಬಾರಿಯ ಫಲಿತಾಂಶ ವಿಜಯಪುರ ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿದೆ.

ಇದು ಪದವಿ ಪೂರ್ವ ಶಿಕ್ಷಣ ಇಲಾಖೆ, ಉಪನ್ಯಾಸಕರ ವಲಯದಲ್ಲಿ ಹರ್ಷದ ಹೊನಲು ಹರಿಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮೊಗದಲ್ಲೂ ಮಂದಹಾಸ ಮೂಡಿಸಿದೆ.

ರಾಜ್ಯ ರ‍್ಯಾಂಕಿಂಗ್ ಪಟ್ಟಿಯಲ್ಲಿ ಜಿಲ್ಲೆಗೆ 14ನೇ ಸ್ಥಾನ ಲಭಿಸಿದ್ದು, ಒಟ್ಟಾರೆ 68.55% ಫಲಿತಾಂಶ ದೊರಕಿದೆ. ರಾಜ್ಯ ಫಲಿತಾಂಶ 61.73ರಷ್ಟಿದ್ದು, ಜಿಲ್ಲೆಯ ಫಲಿತಾಂಶ ಇದಕ್ಕಿಂತಲೂ ಹೆಚ್ಚಿದೆ. ಹಿಂದಿನ ವರ್ಷ ಜಿಲ್ಲೆಗೆ 24ನೇ ರ‍್ಯಾಂಕಿಂಗ್ ಲಭಿಸಿತ್ತು. ಫಲಿತಾಂಶ ಸಹ 63.10% ದೊರಕಿತ್ತು.

ಹಿಂದಿನ ವರ್ಷ ಹಾಗೂ ಈಗಿನ ಫಲಿತಾಂಶ ಹೋಲಿಸಿದರೆ, ರ‍್ಯಾಂಕಿಂಗ್ ಸ್ಥಾನಮಾನದಲ್ಲಿ ಜಿಲ್ಲೆ 10 ಸ್ಥಾನ ಜಿಗಿತಗೊಂಡಿದೆ. ಫಲಿತಾಂಶದಲ್ಲೂ 5% ನಷ್ಟು ಹೆಚ್ಚಳಗೊಂಡಿದ್ದು, ಶೈಕ್ಷಣಿಕ ವಲಯದಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ.

2011ರಿಂದ ಇಲ್ಲಿಯವರೆಗಿನ ಒಂಬತ್ತು ವರ್ಷದಲ್ಲಿನ ಫಲಿತಾಂಶದ ದಾಖಲೆ ಅವಲೋಕಿಸಿದರೆ, ಈ ವರ್ಷವೇ ಅತ್ಯಂತ ಹೆಚ್ಚಿನ ಪ್ರಮಾಣದ ಫಲಿತಾಂಶ ಜಿಲ್ಲೆಗೆ ಲಭಿಸಿದೆ. ಇದರಿಂದ ಈ ದಶಕದಲ್ಲಿ ನೂತನ ಮೈಲುಗಲ್ಲು ನಿರ್ಮಾಣಗೊಂಡಂತಾಗಿದೆ.

ರಾಜ್ಯದ ಒಟ್ಟಾರೆ ಫಲಿತಾಂಶ 61.73%ನಷ್ಟಿದ್ದರೆ, ಜಿಲ್ಲೆಯ ಫಲಿತಾಂಶದ ಶೇಕಡಾವಾರು ಪ್ರಮಾಣ 68.55%ನಷ್ಟಿರುವುದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಸಂತಸದ ಜತೆ, ನೆಮ್ಮದಿಯ ನಿರಾಳಭಾವ ಮೂಡಿಸಿದೆ. ಎಲ್ಲೆಡೆ ಫಲಿತಾಂಶಕ್ಕೆ ತೃಪ್ತಿ ವ್ಯಕ್ತವಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆಗೈಯುವ ಅನಿಸಿಕೆ ವ್ಯಕ್ತವಾಗಿವೆ.

ರಾಜ್ಯ ಫಲಿತಾಂಶಕ್ಕಿಂತ ಜಿಲ್ಲೆಯದ್ದು ಹೆಚ್ಚಿದೆ

ರ‍್ಯಾಂಕಿಂಗ್ ಪಟ್ಟಿಯಲ್ಲಿ 10 ಸ್ಥಾನ ಜಿಗಿತ

ಫಲಿತಾಂಶದಲ್ಲೂ 5% ಹೆಚ್ಚಳ; ಖುಷಿ

ಪರಿಶ್ರಮಕ್ಕೆ ತಕ್ಕ ಪ್ರತಿಫಲ..!

‘ಶೈಕ್ಷಣಿಕ ವರ್ಷದ ಆರಂಭದಿಂದಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿದ ಸೂಚನೆಗಳನ್ನು ಜಿಲ್ಲೆಯ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದ ಪರಿಣಾಮ ಈ ಸಕಾರಾತ್ಮಕ ಫಲಿತಾಂಶ ದೊರಕಿದೆ’ ಎನ್ನುತ್ತಾರೆ ಡಿಡಿಪಿಯು ಶಂಕರ ವೈ.ಅಮಾತೆ.

‘ಕಾಲೇಜುಗಳು ಆರಂಭಗೊಂಡ ಬೆನ್ನಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಗ್ರಾಮರ್‌ ಹಾಗೂ ಮಾತುಗಾರಿಕೆ ಬಗ್ಗೆ 15 ದಿನ ವಿಶೇಷ ತರಬೇತಿ ಶಿಬಿರ ನಡೆಸಿದ್ದು ಇದೀಗ ಫಲಪ್ರದ ನೀಡಿದೆ.

ಜಿಲ್ಲೆಯ ಪ್ರಾಚಾರ್ಯರ ಮಹಾಮಂಡಲದಿಂದ ನುರಿತ ವಿಷಯ ತಜ್ಞರು, ಸಂಪನ್ಮೂಲ ವ್ಯಕ್ತಿಗಳು, ಉಪನ್ಯಾಸಕರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಪಾಸಿಂಗ್ ಪ್ಯಾಕೇಜ್‌ ವಿತರಿಸಿದ್ದೆವು. ಎ.ಬಿ.ಸಿ ಎಂದು ವಿದ್ಯಾರ್ಥಿಗಳ ಗುಂಪು ರಚಿಸಲಾಗಿತ್ತು.

ಆಯಾ ಗುಂಪಿನ ಸಾಮರ್ಥ್ಯಕ್ಕೆ ತಕ್ಕಂತೆ ಪಾಸಿಂಗ್ ಪ್ಯಾಕೇಜ್‌ ವಿತರಿಸಿದ್ದೆವು. ಸಿ ವರ್ಗದ ಗುಂಪಿಗೆ ಪಾಸಾಗುವ ನಿಟ್ಟಿನಲ್ಲಿ ಪಾಸಿಂಗ್ ಪ್ಯಾಕೇಜ್‌ ಸಿದ್ಧಪಡಿಸಿಕೊಟ್ಟಿದ್ದು, ಇದೀಗ ಫಲಿತಾಂಶದಲ್ಲಿ ಭಾರಿ ಬದಲಾವಣೆ ತಂದು ಕೊಟ್ಟಿದೆ’ ಎಂದು ಎಸ್‌.ವೈ.ಅಮಾತೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಪನ್ಯಾಸಕರಿಗೂ ಸಹ ತಲಾ ಐದೈದು ದಿನ ವಿಶೇಷ ತರಬೇತಿ ಕಾರ್ಯಾಗಾರ ನಡೆಸಿದ್ದೆವು. ಪ್ರತಿ ವಿಷಯವಾರು ಶಿಬಿರ ನಡೆದಿದ್ದವು. ಬೇರೆ ಜಿಲ್ಲೆಯ ನುರಿತ ಉಪನ್ಯಾಸಕರು, ತಜ್ಞರು ಇದರಲ್ಲಿ ಭಾಗಿಯಾಗಿ ಫಲಿತಾಂಶ ಸುಧಾರಣೆಯ ಬಗ್ಗೆಯೇ ತರಬೇತಿ ನೀಡಿದ್ದರು’ ಎಂದು ಡಿಡಿಪಿಯು ಹೇಳಿದರು.

‘ಕಿರು ಪರೀಕ್ಷೆಗಳನ್ನು ನಡೆಸಿದ್ದು ಅನುಕೂಲಕಾರಿಯಾಗಿದೆ. ಇನ್ನೂ ನಿತ್ಯವೂ ಪ್ರತಿ ಕಾಲೇಜಿನಲ್ಲೂ ಒಂದೊಂದು ತಾಸು ವಿಶೇಷ ತರಗತಿ ನಡೆದಿವೆ. ಇಲ್ಲಿ ಫಲಿತಾಂಶ ಹೆಚ್ಚಳ, ಪಾಸಿಂಗ್‌ ಪ್ಯಾಕೇಜ್‌ ಕುರಿತಂತೆಯೇ ಹೇಳಿಕೊಟ್ಟ ಪರಿಣಾಮ’ ಫಲಿತಾಂಶ ಸಕಾರಾತ್ಮಕವಾಗಿ ಹೊರಹೊಮ್ಮಿದೆ’ ಎಂದು ಅಮಾತೆ ತಿಳಿಸಿದರು.

ವರ್ಷವಾರು ವಿಜಯಪುರ ಜಿಲ್ಲೆಯ ಫಲಿತಾಂಶದ ವಿವರ

ವರ್ಷ ಫಲಿತಾಂಶ
2011 45.78
2012 47.74
2013 51.54
2014 57.38
2015 60.65
2016 60.39
2017 43.00
2018 63.10
2019 68.55

ಆಧಾರ: ಪದವಿ ಪೂರ್ವ ಶಿಕ್ಷಣ ಇಲಾಖೆ

ಅಂಕಿ–ಅಂಶ

26,701 ವಿದ್ಯಾರ್ಥಿಗಳು ಪರೀಕ್ಷೆ ಬರೆದವರು ಜಿಲ್ಲೆಯಲ್ಲಿ

14668 ಕಲಾ ವಿಭಾಗದ ಪರೀಕ್ಷೆ ಬರೆದವರು

4786 ವಾಣಿಜ್ಯ ವಿಭಾಗದ ಪರೀಕ್ಷೆ ಬರೆದವರು

7247 ವಿಜ್ಞಾನ ವಿಭಾಗದ ಪರೀಕ್ಷೆ ಬರೆದವರು

ಇನ್ನಷ್ಟು...

ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಕಾಮರ್ಸ್ ಸಾಧಕಿ ಅನ್ಸಿಲ್ಲಾ ಡಿಸೋಜಗೆ ಸಿಎ ಮಾಡುವ ಕನಸು

ಕಲಾ ವಿಭಾಗ: ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಕಾಲೇಜಿಗೆ 9 ರ‍್ಯಾಂಕ್

ಪಿಯು ವಾಣಿಜ್ಯದಲ್ಲಿ ದಕ್ಷಿಣ ಕನ್ನಡ, ವಿಜ್ಞಾನದಲ್ಲಿ ಬೆಂಗಳೂರು ಮೊದಲು

ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟ ದಕ್ಷಿಣ ಕನ್ನಡ ಜಿಲ್ಲೆ

ಮೇಲೇರಿದ ಚಿಕ್ಕೋಡಿ, ಕೊಂಚ ಚೇತರಿಸಿಕೊಂಡ ಬೆಳಗಾವಿ

ದ್ವಿತೀಯ ಪಿಯು: ದಾವಣಗೆರೆಗೆ ಶೇ 62.53 ಫಲಿತಾಂಶ

ಪರೀಕ್ಷೆಯಲ್ಲಿ ಫೇಲಾಗುವುದೇನೂ ಮಹಾಪರಾಧವಲ್ಲ

ಪಾಸಾದ್ರೆ ಸಂತೋಷ, ಫೇಲಾದ್ರೆ ಚಿಂತೆಬೇಡ, ಇನ್ನೊಮ್ಮೆ ಯತ್ನಿಸಿ

ಬಿಕಾಂ– ಅವಕಾಶಗಳ ಹುಲ್ಲುಗಾವಲು

ಬಿಎ– ಮಾನವಿಕ ವಿಭಾಗದಲ್ಲಿ ಹೊಸನೀರು

ಬಿಎಸ್ಸಿ– ಶುದ್ಧ ವಿಜ್ಞಾನಕ್ಕೆ ಮರಳಿ ಬೇಡಿಕೆ

ಪಿಯು ಫಲಿತಾಂಶ: 24ನೇ ಸ್ಥಾನಕ್ಕೆ ಕುಸಿದ ರಾಮನಗರ

ಪಿಯು ಫಲಿತಾಂಶ: ಒಂದು ಸ್ಥಾನ ಕುಸಿದ ರಾಯಚೂರು

ಪಿಯುಸಿ ಫಲಿತಾಂಶ: ತುಮಕೂರು ಜಿಲ್ಲೆಗೆ 17ನೇ ಸ್ಥಾನ 

ಕಾಮರ್ಸ್ ಸಾಧಕಿ ಅನ್ಸಿಲ್ಲಾ ಡಿಸೋಜಗೆ ಸಿಎ ಮಾಡುವ ಕನಸು

ಅವತ್ತಿನ ಪಾಠ ಅವತ್ತೇ ಓದ್ಕೊಳ್ತಿದ್ದೆ: ಸಾಯಿಶ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !