ಮೋದಿ ಜೀವನಾಧಾರಿತ ಚಿತ್ರದಲ್ಲಿ ವಿವೇಕ್‌ ಒಬೇರಾಯ್

7

ಮೋದಿ ಜೀವನಾಧಾರಿತ ಚಿತ್ರದಲ್ಲಿ ವಿವೇಕ್‌ ಒಬೇರಾಯ್

Published:
Updated:
Prajavani

ನವದೆಹಲಿ: ಪ್ರಧಾನಿ ನರೇಂದ್ರಮೋದಿ ಅವರ ಜೀವನಾಧಾರಿತ ಚಿತ್ರ ‘ಪಿ.ಎಂ ನರೇಂದ್ರಮೋದಿ’ ಸಿನಿಮಾದಲ್ಲಿ ನಟ ವಿವೇಕ್‌ ಒಬೆರಾಯ್‌ ನಟಿಸುವುದು ಖಚಿತಪಟ್ಟಿದೆ. ಬಾಲಿವುಡ್‌ ವಹಿವಾಟು ವಿಶ್ಲೇಷಕ ತರಣ್‌ ಆದರ್ಶ್‌ ಅವರು ಈ ವಿಷಯ ಕುರಿತಂತೆ ಟ್ವೀಟ್‌ ಮಾಡಿ, ಖಚಿತಪಡಿಸಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಸರಬ್‌ಜಿತ್‌, ಮೇರಿಕೋಮ್‌ ಅವರ ಜೀವನಾಧಾರಿತ ಸಿನಿಮಾ ನಿರ್ದೇಶನ ಖ್ಯಾತಿಯ ಒಮಂಗ್‌ ಕುಮಾರ್‌ ಅವರೇ ಈ ಸಿನಿಮಾ ನಿರ್ದೇಶನ ಮಾಡಲಿದ್ದು, ಸಂದೀಪ್‌ಸಿಂಗ್‌ ನಿರ್ಮಾಣ ಮಾಡಲಿದ್ದಾರೆ. 23 ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

ಜನವರಿ 7ರಂದು ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಲಿದ್ದು, ಜನವರಿ ಮಧ್ಯಭಾಗದಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಮುಂಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಿದ್ದಾರೆ. 

2017ರಲ್ಲಿ ಸಂಜಯ್‌ ದತ್‌ ನಾಯಕನಟರಾಗಿ ನಟಿಸಿದ ‘ಭೂಮಿ’ ಸಿನಿಮಾವನ್ನು ಒಮಂಗ್‌ಕುಮಾರ್‌ ನಿರ್ದೇಶನ ಮಾಡಿದ್ದರು.

ಬರಹ ಇಷ್ಟವಾಯಿತೆ?

  • 10

    Happy
  • 1

    Amused
  • 0

    Sad
  • 0

    Frustrated
  • 5

    Angry

Comments:

0 comments

Write the first review for this !