ಮತದಾರ ಪಟ್ಟಿಯಲ್ಲಿ ಲೋಪ: ಬಿಜೆಪಿ ಆರೋಪ

7

ಮತದಾರ ಪಟ್ಟಿಯಲ್ಲಿ ಲೋಪ: ಬಿಜೆಪಿ ಆರೋಪ

Published:
Updated:
Deccan Herald

ಸಿಂದಗಿ: ಪಟ್ಟಣದ ಎಲ್ಲ 23 ವಾರ್ಡ್‌ಗಳ ಮತದಾರರ ಪಟ್ಟಿ ಗೊಂದಲಮಯವಾಗಿದೆ. ಎಲ್ಲ ವಾರ್ಡ್‌ಗಳ ಮತದಾರರ ಪಟ್ಟಿಯಲ್ಲಿನ ಲೋಪ ಸರಿಪಡಿಸಬೇಕು ಎಂದು ಬಿಜೆಪಿ ಮಂಡಲ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದು ಬುಳ್ಳಾ, ಪ್ರಮುಖರಾದ ಸಂತೋಷ ಪಾಟೀಲ ಡಂಬಳ, ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಆರ್.ಯಂಟಮಾನ ಮಾತನಾಡಿ, ಪುರಸಭೆಗೆ ಚುನಾವಣೆ ಸಮೀಪಿಸಿದೆ. ಈ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಗೊಂದಲ ಉಂಟಾಗಿದೆ. ಚೆಕ್‌ಬಂದಿ ಅನ್ವಯ ಮತದಾರ ಪಟ್ಟಿ ಇಲ್ಲ ಎಂದು ದೂರಿದರು.

ವ್ಯಕ್ತಿ ವಾಸ ಮಾಡುವ ವಾರ್ಡಿನಲ್ಲಿ ಅವರ ಮತ ಇಲ್ಲ. ಆದರೆ, ಹಲವರ ಹೆಸರು ಬೇರೆ ವಾರ್ಡ್‌ನ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಇದು ಪೂರ್ವಯೋಜಿತ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವಾರ್ಡ್‌ನಲ್ಲಿ 200ಕ್ಕೂ ಅಧಿಕ ನಕಲಿ ಮತದಾರರು ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಮುಂಬರುವ ಪುರಸಭೆ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಆಗುವುದಿಲ್ಲ. ಈಗಲೇ ಜಿಲ್ಲಾಧಿಕಾರಿ ಎಚ್ಚೆತ್ತುಕೊಂಡು ಮತದಾರ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಶಿವಾನಂದ ಆಲಮೇಲ, ಪದಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !