ಐರ್ಲೆಂಡ್‌ನಲ್ಲಿ ಗರ್ಭಪಾತ ಕಾನೂನುಬದ್ಧ: ಮಸೂದೆಗೆ ಅಸ್ತು

7
ಸಂಸತ್‌ನ ಐತಿಹಾಸಿಕ ಕ್ರಮ

ಐರ್ಲೆಂಡ್‌ನಲ್ಲಿ ಗರ್ಭಪಾತ ಕಾನೂನುಬದ್ಧ: ಮಸೂದೆಗೆ ಅಸ್ತು

Published:
Updated:
Deccan Herald

ಡಬ್ಲಿನ್‌/ ಲಂಡನ್‌ : ಗರ್ಭಪಾತನ್ನು ಕಾನೂನುಬದ್ಧಗೊಳಿಸುವ ಐತಿಹಾಸಿಕ ಮಸೂದೆಯನ್ನು ಐರ್ಲೆಂಡ್‌ ಸಂಸತ್‌ ಅಂಗೀಕರಿಸಿದೆ. ಕ್ಯಾಥೊಲಿಕ್‌ ಸಮುದಾಯವೇ ಅಧಿಕ ಸಂಖ್ಯೆಯಲ್ಲಿರುವ ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಕರ್ನಾಟಕದ ಬೆಳಗಾವಿ ಮೂಲದ ದಂತವೈದ್ಯೆ ‌ಸವಿತಾ ಹಾಲಪ್ಪನವರ ಅವರು 2012ರಲ್ಲಿ 17 ವಾರಗಳ ಗರ್ಭಿಣಿಯಾಗಿದ್ದಾಗ, ರಕ್ತದಲ್ಲಿನ ನಂಜಿನಿಂದಾಗಿ ಸಾವನ್ನಪ್ಪಿದ್ದರು. ಗರ್ಭಪಾತಕ್ಕೆ ‍ಪದೇ ಪದೇ ಮನವಿ ಮಾಡಿದ್ದರೂ, ಕಾನೂನಿನಲ್ಲಿ ಅವಕಾಶ ಇಲ್ಲದ್ದರಿಂದ ವೈದ್ಯರು ಅದಕ್ಕೆ ಅನುಮತಿ ನೀಡಿರಲಿಲ್ಲ. ಈ ಘಟನೆ ಅಂತರ­ರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿತ್ತು.

ಮಸೂದೆಯ ಪರವಾಗಿ ಶೇ 66.4ರಷ್ಟು ಮತಗಳು ಚಲಾವಣೆಯಾಗಿವೆ. ಅಧ್ಯಕ್ಷ ಮೈಕಲ್ ಡಿ. ಹಿಗ್ಗಿನ್ಸ್‌ ಅವರ ಅಂಕಿತ ದೊರೆತ ಬಳಿಕ ಈ ಮಸೂದೆ ಕಾನೂನು ಆಗಲಿದೆ.

ಈವರೆಗೆ, ತೊಂದರೆಯಲ್ಲಿರುವ ಭ್ರೂಣವನ್ನು ಗರ್ಭಪಾತ ಮಾಡಿಸಿಕೊಳ್ಳಲಾಗದೆ ಸಾಕಷ್ಟು ಮಹಿಳೆಯರು ಸಂಕಷ್ಟ ಅನುಭವಿಸುತ್ತಿದ್ದರು. ಇನ್ನು ಮುಂದೆ, ಭ್ರೂಣದ ಬೆಳವಣಿಗೆ ಅಸ್ವಾಭಾವಿಕವಾಗಿದ್ದು ಜೀವಕ್ಕೆ ತೊಂದರೆಯಿದ್ದರೆ, ತಾಯಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಅಪಾಯದಲ್ಲಿದ್ದರೆ 12 ವಾರಗಳವರೆಗಿನ ಭ್ರೂಣದ ಗರ್ಭಪಾತಕ್ಕೆ ಅವಕಾಶ ಇರಲಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !