ಗಂಗಾವತಿ ಪ್ರಾಣೇಶರಿಂದ ಮತದಾನ ಜಾಗೃತಿ

ಶನಿವಾರ, ಏಪ್ರಿಲ್ 20, 2019
28 °C

ಗಂಗಾವತಿ ಪ್ರಾಣೇಶರಿಂದ ಮತದಾನ ಜಾಗೃತಿ

Published:
Updated:
Prajavani

ನಾಲತವಾಡ: ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಮಾತಿನ ಮೋಡಿಗೆ, ಪಟ್ಟಣದ ಜನ ನಕ್ಕು ನಲಿದರು. ಇದರ ಜತೆಯಲ್ಲೇ ಮತದಾನದ ಜಾಗೃತಿಯನ್ನು ಪಡೆದುಕೊಂಡರು.

ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಗಂಡುಮಕ್ಕಳ ಶಾಲೆಯ ಆಟದ ಮೈದಾನದಲ್ಲಿ ಬುಧವಾರ ನಡೆದ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ, ಪ್ರಾಣೇಶ ಮಾತಿಗೆ ಜನ ಸಮ್ಮತಿ ವ್ಯಕ್ತಪಡಿಸಿದರು.

ಮತದಾನ ಏಕೆ ಮಾಡಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತಕ್ಕೂ ಎಷ್ಟು ಮಹತ್ವವಿದೆ ಎಂಬ ವಿಷಯವನ್ನು 'ಒಂದೋ ಎರಡೋ, ಬಾಳೆಲೆ ಹರಡೋ' ಎಂಬ ಹಾಡಿಗೆ ಜೋಡಿಸಿಕೊಂಡು ಪ್ರಾಣೇಶ ಜನರ ಗಮನ ಸೆಳೆದರು.

ಉಪ ತಹಶೀಲ್ದಾರ್ ಬಸವರಾಜ ಭದ್ರಣ್ಣವರ, ಗ್ರಾಮ ಲೆಕ್ಕಾಧಿಕಾರಿ ನಿಂಗಣ್ಣ ದೊರೆ, ಜಿಲ್ಲಾ ಸಮಾಲೋಚಕರಾದ ದೇಸಾಯಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ, ಬಿಎಲ್ಒಗಳಾದ ಮಹಾಂತೇಶ ನೂಲಿನವರ, ಮಲ್ಲಿಕಾರ್ಜುನ ಗಡೇದ, ಮಹಿಬೂಬ ನಾಡದಾಳ, ಮುತ್ತು ತಳವಾರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !