ಮತದಾನ ದಿನ ಕಾನೂನು ಸುವ್ಯವಸ್ಥೆಗೆ 2,200 ಭದ್ರತಾ ಸಿಬ್ಬಂದಿ ನಿಯೋಜನೆ: ಎಸ್‌ಪಿ

ಬುಧವಾರ, ಏಪ್ರಿಲ್ 24, 2019
29 °C
ಪೊಲೀಸ್‌ ಇಲಾಖೆ ಕ್ರಮ

ಮತದಾನ ದಿನ ಕಾನೂನು ಸುವ್ಯವಸ್ಥೆಗೆ 2,200 ಭದ್ರತಾ ಸಿಬ್ಬಂದಿ ನಿಯೋಜನೆ: ಎಸ್‌ಪಿ

Published:
Updated:

ಚಾಮರಾಜನಗರ: ಏಪ್ರಿಲ್‌ 18ರಂದು ನಡೆಯಲಿರುವ ಮತದಾನದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಮತಗಟ್ಟೆಗಳಿಗೆ ಬಿಗಿ ಭದ್ರತೆ ಒದಗಿಸಲಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.

‘ಗಡಿ ಭದ್ರತಾ ಪಡೆ, ರಾಜ್ಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆ, ಪೊಲೀಸ್‌, ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ ಜಿಲ್ಲೆಯಾದ್ಯಂತ 2,200 ಮಂದಿಯನ್ನು ನಿಯೋಜಿಸಲಾಗುವುದು’ ಎಂದು ಅವರು ಹೇಳಿದರು.

‘ಜಿಲ್ಲೆಯಲ್ಲಿ 197 ಸೂಕ್ಷ್ಮ ಮತಗಟ್ಟೆಗಳಿವೆ. ಇಲ್ಲಿ 197 ಹೆಡ್‌ ಕಾನ್‌ಸ್ಟೆಬಲ್‌ಗಳು ಮತ್ತು ಕಾನ್‌ಸ್ಟೆಬಲ್‌ಗಳು ಹಾಗೂ 197 ಗೃಹರಕ್ಷಕ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. 783 ಸಾಮಾನ್ಯ ಮತಗಟ್ಟೆಗಳಲ್ಲಿ 473 ಹೆಡ್‌ ಕಾನ್ ಸ್ಟೆಬಲ್‌, ಕಾನ್‌ಸ್ಟೆಬಲ್‌ಗಳು ಹಾಗೂ ಗೃಹ ರಕ್ಷಕ ದಳದ 310 ಮಂದಿಯನ್ನು ನಿಯೋಜಿಸಲಾಗುವುದು’ ಎಂದು ತಿಳಿಸಿದರು.

ಈಗಾಗಲೇ ಸ್ಥಾಪಿಸಲಾಗಿರುವ 16 ಚೆಕ್‌ ಪೋಸ್ಟ್‌ಗಳಲ್ಲಿ ಹಾಗೂ 12 ಫ್ಲೈಯಿಂಗ್‌ ಸ್ಕ್ವಾಡ್‌ಗೂ ಪೊಲೀಸರು ಭದ್ರತೆ ಒದಗಿಸಲಿದ್ದಾರೆ’ ಎಂದರು.

‘ಈ  ವರ್ಷದ ಮಾರ್ಚ್‌ 31ರ ವರೆಗೆ ಜಾಮೀನುರಹಿತ ವಾರಂಟ್‌ಗಳ 412 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದವು. ಚುನಾವಣೆ ಘೋಷಣೆಯಾದ ನಂತರ 498 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 843 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. 55 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ’ ಎಂದರು.

‘ಮುನ್ನೆಚ್ಚರಿಕೆ ಕ್ರಮವಾಗಿ 1033 ಪ್ರಕರಣಗಳಿಗೆ ಸಂಬಂಧಿಸಿದಂತೆ 1,430 ಮಂದಿಯನ್ನು ವಿಚಾರಣೆ ನಡೆಸಿ, 1,320 ಮಂದಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘655 ಬಂದೂಕುಗಳನ್ನು ಆಯಾ ಠಾಣೆಗಳಲ್ಲಿ ಠೇವಣಿ ಮಾಡಲಾಗಿದೆ. 9 ಬಂದೂಕುಗಳಿಗೆ ವಿನಾಯಿತಿ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

 ‘ಜಿಲ್ಲೆಗೆ ಎರಡು ಬಿಎಸ್‌ಎಫ್‌ ತುಕಡಿಗಳು’

 ‘ಎರಡು ಬಿಎಸ್‌ಎಫ್‌ ತುಕಡಿಗಳು ಜಿಲ್ಲೆಗೆ ಬಂದಿವೆ. ಇವುಗಳನ್ನು 35 ಮತಗಟ್ಟೆಗಳಲ್ಲಿ ನಿಯೋಜಿಸಲಾಗುವುದು, ಕೆಎಸ್‌ಆರ್‌ಪಿಯ ನಾಲ್ಕು ತುಕಡಿಗಳ ನೆರವನ್ನೂ ಪಡೆಯಲಾಗಿದೆ. ಅಲ್ಲದೆ, ಒಬ್ಬ ಎಸ್‌ಪಿ, ಒಬ್ಬರು ಎಎಸ್‌ಪಿ, ಐವರು ಡಿವೈಎಸ್‌ಪಿ, 14 ಇನ್‌ಸ್ಪೆಕ್ಟರ್‌ಗಳು, 22 ಸಬ್‌ ಇನ್‌ಸ್ಪೆಕ್ಟರ್‌ಗಳು, 96 ಎಎಸ್‌ಐ ಹಾಗೂ ಹೆಡ್‌ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌ ಹಾಗೂ ಗೃಹರಕ್ಷಕ ಸಿಬ್ಬಂದಿ ಸೇರಿ 2000 ಮಂದಿ ಭದ್ರತೆ ಒದಗಿಸಲಿದ್ದಾರೆ’ ಎಂದು ಎಸ್‌ಪಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !