ವಿಟಿಯು ರಿಜಿಸ್ಟ್ರಾರ್‌ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಆದೇಶ

7

ವಿಟಿಯು ರಿಜಿಸ್ಟ್ರಾರ್‌ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಆದೇಶ

Published:
Updated:

ಬೆಂಗಳೂರು: ವಿಶ್ವೇಶರಾಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ರಿಜಿಸ್ಟ್ರಾರ್‌ ಎಚ್‌.ಎನ್‌.ಜಗನ್ನಾಥ ರೆಡ್ಡಿ ರಿಜಿಸ್ಟ್ರಾರ್‌ ಆಗಿ ನೇಮಕಗೊಂಡ ದಿನದಿಂದ ಇಲ್ಲಿಯವರೆಗೆ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಲು ರಾಜ್ಯಪಾಲ ವಜುಭಾಯ್ ವಾಲಾ ಆದೇಶ ಹೊರಡಿಸಿದ್ದಾರೆ.

ಡಾ.ಎಸ್‌.ವಿಶ್ವನಾಥ್‌ ಮತ್ತು ಡಾ.ವಾಸುದೇವಮೂರ್ತಿ ಅವರು ಅಕ್ಟೋಬರ್‌ನಲ್ಲಿ ಸಲ್ಲಿಸಿದ ದೂರಿನ ಅನ್ವಯ ಅಕ್ರಮಗಳ ಬಗ್ಗೆ ಕುಲಪತಿಯಿಂದ ರಾಜ್ಯಪಾಲರು ವರದಿ ಕೇಳಿದ್ದರು. ಆದರೆ, ವರದಿ ತೃಪ್ತಿಕರವಾಗಿಲ್ಲ ಎಂಬ ಕಾರಣಕ್ಕೆ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಿ.ಎಸ್‌.ಶಿಂಧೆ ಅವರ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗ ರಚಿಸಲು ರಾಜ್ಯಪಾಲರು ಆದೇಶಿಸಿದ್ದಾರೆ.

ರಾಜ್ಯಪಾಲರ ಆದೇಶದ ಮೇರೆಗೆ ರಿಜಿಸ್ಟ್ರಾರ್‌ ವಿಚಾರಣಾ ಆಯೋಗದ ಮುಂದೆ ಹಾಜರಾಗಬೇಕು. ವಿಚಾರಣೆಗೆ ಅಗತ್ಯ ಸಹಕಾರ ನೀಡಬೇಕು. ಅಲ್ಲದೆ, ಆಯೋಗ ಮುಖ್ಯಸ್ಥರಿಗೆ ಕಚೇರಿ ಮತ್ತು ಇತರ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ವಿಟಿಯು ಕುಲಪತಿ ಕರಿಸಿದ್ದಪ್ಪ ಅವರು ರಿಜಿಸ್ಟ್ರಾರ್‌ಗೆ ಸೂಚಿಸಿದ್ದಾರೆ.

 ರಾಜ್ಯಪಾಲರ ಆದೇಶವನ್ನು ಎಚ್‌.ಎನ್‌.ಜಗನ್ನಾಥ ರೆಡ್ಡಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಿಚಾರಣೆ ಆಯೋಗದ ಮುಖ್ಯಸ್ಥ ಡಿ.ಎಸ್.ಶಿಂಧೆ, ಕುಲಪತಿ ಕರಿಸಿದ್ದಪ್ಪ, ವಿಟಿಯು, ಉನ್ನತ ಶಿಕ್ಷಣ ಇಲಾಖೆ, ಡಾ.ಎಸ್‌.ವಿಶ್ವನಾಥ್‌ ಮತ್ತು ಡಾ.ವಾಸುದೇವಮೂರ್ತಿ ಅವರಿಗೆ ನೋಟಿಸ್‌ ನೀಡಲಾಗಿದೆ.

‘ನನ್ನನ್ನು ಹುದ್ದೆಯಿಂದ ಇಳಿಸುವ ಉದ್ದೇಶದಿಂದ ಪಿತೂರಿ ನಡೆಸಿ ಆರೋಪಗಳನ್ನು ಹೊರಿಸಲಾಗಿದೆ. ನಾನು ಯಾವುದೇ ಅಕ್ರಮಗಳನ್ನು ನಡೆಸಿಲ್ಲ’ ಎಂದು ಜಗನ್ನಾಥ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !