ಹಸಿವು ನಿರ್ಮೂಲನೆಗೆ ವಾಕಥಾನ್

7

ಹಸಿವು ನಿರ್ಮೂಲನೆಗೆ ವಾಕಥಾನ್

Published:
Updated:
Deccan Herald

ಸಮಾಜದಲ್ಲಿ ಹಸಿವು ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ಎನ್‍ಎಂಐಎಂಎಸ್‍ನ ಸಾಮಾಜಿಕ ಹೊಣೆಗಾರಿಕೆ ಸಮಿತಿಯಾಗಿರುವ ಉದ್ಯಮ್ ಸಂಸ್ಥೆಯು ಅಂತರರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯಾಗಿರುವ ರೈಸ್ ಎಗೆನೆಸ್ಟ್ ಹಂಗರ್ ಇಂಡಿಯಾ (ಆರ್‍ಎಎಚ್‍ಐ) ಸಹಯೋಗದಲ್ಲಿ ಬೆಂಗಳೂರಿನಲ್ಲಿ ವಾಕ್‍ಥಾನ್ ಅನ್ನು ಏರ್ಪಡಿಸಿತ್ತು.

ನಗರದಲ್ಲಿ ಈಚೆಗೆ ನಡೆದ ವಾಕಥಾನ್‍ನಲ್ಲಿ ಎನ್‍ಎಂಐಎಂಎಸ್‍ನ ನೂರಾರು ಸ್ವಯಂಸೇವಕರು ಪಾಲ್ಗೊಂಡು ವಿವಿಧ ರಸ್ತೆಗಳಲ್ಲಿ ಸಂಚರಿಸಿ ಹಸಿವು ನಿರ್ಮೂಲನೆ ಮಾಡುವ ಸದುದ್ದೇಶದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ವಾಕಥಾನ್‍ನ ಅಂಗವಾಗಿ ನಡೆದ ಸಮೂಹ ಸಂವಾದದಲ್ಲಿ ರಾಹಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಡೋಲಾ ಮೊಹಾಪಾತ್ರ ಅವರು ಪಾಲ್ಗೊಂಡಿದ್ದರು.

ಫೋರಂ ಮಾಲ್‍ನಿಂದ ಆರಂಭವಾದ ವಾಕಥಾನ್ ಎನ್‍ಎಂಐಎಂಎಸ್‍ನಲ್ಲಿ ಅಂತ್ಯಗೊಂಡಿತು. ವಿದ್ಯಾರ್ಥಿಗಳು ‘ಭೂಕ್‍ಮಾರಿ’ ಎಂಬ ಬೀದಿನಾಟಕವನ್ನು  ಪ್ರದರ್ಶಿಸಿದರು. ಹಸಿವು ಮುಕ್ತಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಪ್ರದರ್ಶನ ಮಾಡಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !