ತ್ಯಾಜ್ಯರಾಶಿಗೆ ಬೆಂಕಿ: ತೊಂದರೆ

7

ತ್ಯಾಜ್ಯರಾಶಿಗೆ ಬೆಂಕಿ: ತೊಂದರೆ

Published:
Updated:

ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಬೆಳ್ಳಹಳ್ಳಿ ಕ್ರಾಸ್-ರೇವಾ ಕಾಲೇಜು ರಸ್ತೆ, ಜೈಭೀಮ್ ನಗರ ಸಮೀಪದ ಬಂಡೆಪ್ರದೇಶದಲ್ಲಿ ಬಿಬಿಎಂಪಿ ವಿಲೇವಾರಿ ಮಾಡಿರುವ ತ್ಯಾಜ್ಯದ ರಾಶಿಗೆ ಬೆಂಕಿಬಿದ್ದಿದೆ. ಪರಿಣಾಮವಾಗಿ ಸುತ್ತಮುತ್ತಲಿನ ಜನರು ವಿಷಯುಕ್ತ ಹೊಗೆ ಸೇವಿಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ.

ಜತೆಗೆ ಸುತ್ತಮುತ್ತಲಿನ ಕೈಗಾರಿಕೆಗಳ ಹೊಗೆಯನ್ನೂ ಸೇವಿಸಬೇಕಾಗಿದೆ. ಹಗಲಿನಲ್ಲಿ ನೊಣಗಳ ಕಾಟ, ರಾತ್ರಿ ವೇಳೆ ಸೊಳ್ಳೆ ಕಾಟ ವಿಪರೀತವಾಗಿದೆ ಎಂದು ಜೈಭೀಮ್‌ನಗರದ ನಿವಾಸಿ ನಾಗರಾಜಪ್ಪ ದೂರಿದರು.

ಬಿಬಿಎಂಪಿ ಅಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತುಕೊಂಡು ಕೂಡಲೇ ತ್ಯಾಜ್ಯವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !