ಕೆರೆ ನೀರು ತುಂಬಿಸಲು ರೈತರ ಆಗ್ರಹ

ಬುಧವಾರ, ಜೂನ್ 26, 2019
22 °C
ದೇವರಹಿಪ್ಪರಗಿ: ತಹಶೀಲ್ದಾರ್, ಪಟ್ಟಣ ಪಂಚಾಯ್ತಿ ಕಚೇರಿ ಮುತ್ತಿಗೆ, ಪ್ರತಿಭಟನೆ

ಕೆರೆ ನೀರು ತುಂಬಿಸಲು ರೈತರ ಆಗ್ರಹ

Published:
Updated:
Prajavani

ದೇವರಹಿಪ್ಪರಗಿ: ಪಟ್ಟಣದ ಎರಡು ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತರು ಎತ್ತು, ಚಕ್ಕಡಿಗಳೊಂದಿಗೆ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯ‌್ತಿ ಕಚೇರಿಗೆ ಬಂದು ಸೋಮವಾರ ಪ್ರತಿಭಟನೆ ನಡೆಸಿದರು.

ಕಚೇರಿ ಮುಂದೆ ಎತ್ತುಗಳನ್ನು ಕಟ್ಟಿ ಪ್ರತಿಭಟನೆ ಆರಂಭಿಸಿ ಧರಣಿ ಕುಳಿತರು. ಅದೇ ಸಮಯಕ್ಕೆ ಕಚೇರಿಗೆ ಬಂದ ತಹಶೀಲ್ದಾರ್ ರಮೇಶ ಅಳವಂಡಿಕರ ರೈತ ನಾಯಕರ ಜೊತೆ ಚರ್ಚಿಸಿ ಮನವೊಲಿಸಲು ಯತ್ನಿಸಿದರಾದರೂ ಜಗ್ಗದ ರೈತರು, ‘ಜಿಲ್ಲಾಧಿಕಾರಿ ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳು ಬಂದು ನೀರು ಹರಿಸುವ ಭರವಸೆ ನೀಡುವವರೆಗೆ ಈ ಜಾಗ ಬಿಟ್ಟು ಕದಲುವುದಿಲ್ಲ’ ಎಂದು ಪಟ್ಟು ಹಿಡಿದರು.

ಸುಮಾರು ನಾಲ್ಕು ತಾಸುಗಳ ನಂತರ ಕೆಬಿಜೆಎನ್ಎಲ್ ಅಧಿಕಾರಿ ವಿನಾಯಕ ಹರನಟ್ಟಿ, ಎಇಇ ಅತನೂರ ಭೇಟಿ ನೀಡಿ, ಎರಡು ದಿನಗಳ ಒಳಗಾಗಿ ಕೆರೆಗೆ ನೀರು ಹರಿಸುವ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯ ಅವಧಿಯಲ್ಲಿ ಜಾನುವಾರಗಳಿಗೆ ಕುಡಿಯಲು ಪಟ್ಟಣ ಪಂಚಾಯಿತಿ ಸಿಬ್ಬಂದಿ ಟ್ಯಾಂಕರ್ ಮೂಲಕ ನೀರು ಪೂರೈಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ರೈತ ಮುಖಂಡರಾದ ಅಜೀಜ ಯಲಿಗಾರ, ಸಿದ್ದು ಮಸಬಿನಾಳ, ಸೋಮು ಹಿರೇಮಠ ಮಾತನಾಡಿ, ‘ಕೆಬಿಜೆಎನ್ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಕೆರೆಗಳಿಗೆ ನೀರು ಬರುತ್ತಿಲ್ಲ. ಅಧಿಕಾರಿಗಳಿಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ’ ಎಂದರು.

‘ಬರಗಾಲ ಬವಣೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕೆರೆಯ ನೀರು ಆಸರೆಯಾಗಬಹುದೆಂಬ ಭರವಸೆ ಸುಳ್ಳಾಗಿದೆ. ಕೆರೆಗೆ ನೀರು ಬಿಡದೆ ರೈತರ ಬಾಳಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹೀಗಾದರೆ ನಮ್ಮ ಪಾಡೇನು’ ಎಂದು ಪ್ರಶ್ನಿಸಿದರು.

‘ದೇವೂರ, ಮಣೂರ, ಜಾಲವಾದ, ಬಮ್ಮನಜೋಗಿ ಕೆರೆಗಳಿಗೆ ನೀರು ತುಂಬಿಸಿ ನಮ್ಮ ಕೆರೆಗೆ ನೀರು ಬಿಡದೆ ಇರುವುದು ಯಾವ ನ್ಯಾಯ. ಎರಡು ಮೂರು ದಿನಗಳೊಳಗಾಗಿ ಕೆರೆಗೆ ನೀರು ಬಿಡದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶರಣು ಕಕ್ಕಸಗೇರಿ, ನಾಶೀರ ಬೇಪಾರಿ, ಬಾಬು ಒಂಟೆತ್ತಿನ, ಈರಣ್ಣ ಮಠ, ಅಶೋಕ ಒಂಟೆತ್ತಿನ, ಗಿರೀಶ ಬುದ್ನಿ, ರೇವಣಸಿದ್ದಪ್ಪ ಯಳಕೋಟಿ, ಪ್ರಮೋದ ನಾಡಗೌಡ, ಮಲ್ಲಪ್ಪ ಭಾವಿಮನಿ, ಚಂದ್ರಾಮ ನಾಯ್ಕೋಡಿ, ಗುಲಾಬ್ ಬಿಜಾಪುರ, ರೇವಣಸಿದ್ದಪ್ಪ ಯಳಕೋಟಿ, ಬಸಲಿಂಗಪ್ಪ ಭಾವಿಮನಿ, ಸಂಗು ಮಸಬಿನಾಳ, ರಾಮು ತಳವಾರ ಸೇರಿದಂತೆ ನೂರಾರು ರೈತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !