ಉದ್ಯಮ ಆಧಾರಿತ ಕಲಿಕೆಗೆ ಒತ್ತು ನೀಡಬೇಕು: ಆಕಾಶ್‌ ಸೇಥಿ

7

ಉದ್ಯಮ ಆಧಾರಿತ ಕಲಿಕೆಗೆ ಒತ್ತು ನೀಡಬೇಕು: ಆಕಾಶ್‌ ಸೇಥಿ

Published:
Updated:
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಿದ್ದ ಕ್ವೆಸ್ಟ್ ಟು ಲರ್ನ್‌ ಕಾರ್ಯಾಗಾರದ ದೃಶ್ಯ     –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕಾಲಕ್ಕೆ ತಕ್ಕಂತೆ ಶಿಕ್ಷಣದ ಮಾದರಿಯಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ. ಹೊಸಬರು ಅತ್ಯುತ್ತಮ ಕೌಶಲಗಳನ್ನು ಹೊಂದಿರುವುದಿಲ್ಲ, ಎಂಬ ಮಾತು ಕೈಗಾರಿಕಾ ವಲಯದಲ್ಲಿ ಸಾಮಾನ್ಯವಾಗಿದೆ’ ಎಂದು ಕ್ವೆಸ್ಟ್‌ ಅಲೈನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಆಕಾಶ್‌ ಸೇಥಿ ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ‘ಕ್ವೆಸ್ಟ್‌ ಟು ಲರ್ನ್‌’ ಕಾರ್ಯಾಗಾರದ ಬಳಿಕ ಅವರು ಮಾತನಾಡಿದರು.

‘ಹೊಸಬರಲ್ಲಿ ಕಲಿಯುವ ಆಸಕ್ತಿ ಕಡಿಮೆಯಾಗಿದೆ. ಸಂವಹನ ಕಲೆಯಲ್ಲಿ ಹಿಂದೆ ಉಳಿದಿದ್ದಾರೆ. ಅವರಿಗೆ ಕಲಿಸುವುದಕ್ಕಾಗಿ ಹೆಚ್ಚು ಸಮಯವನ್ನು ವ್ಯಯಮಾಡಬೇಕಾಗಿದೆ’ ಎಂದು ಅವರು ಹೇಳಿದರು.

‘ತಂಡದಲ್ಲಿ ಕೆಲಸ ಮಾಡುವ ಗುಣವನ್ನು ಅವರು ಕಳೆದುಕೊಳ್ಳುತ್ತಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವ ಸಾಮಾನ್ಯ ಜ್ಞಾನದ ಕೊರತೆ ಕೂಡ ಇದೆ. ಅಹಂಕಾರದ ಮನೋಭಾವ ಇದಕ್ಕೆಲ್ಲಾ ಕಾರಣ, ಎಂಬ ಮಾತುಗಳು ಕೇಳಿಬರುತ್ತಿರುವುದು ಆತಂಕಕಾರಿ’ ಎಂದರು.

‘ಶೈಕ್ಷಣಿಕ ಸಂಸ್ಥೆಗಳು ಉತ್ತಮ ಸಂಬಂಧ ಹೊಂದಿದ್ದರೆ ಅವರಿಗೆ ಉದ್ಯಮ ಕ್ಷೇತ್ರದ ಜ್ಞಾನ ಹೆಚ್ಚುತ್ತದೆ. ಸಾಂಸ್ಥಿಕ ಜಗತ್ತಿನ ಅಗತ್ಯಗಳ ಅರಿವು ಶಿಕ್ಷಕರಿಗೆ ಇರಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !