ರಮೇಶ ಬಂದರೆ ಸ್ವಾಗತ; ಜಿಗಜಿಣಗಿ

ಸೋಮವಾರ, ಮೇ 27, 2019
33 °C

ರಮೇಶ ಬಂದರೆ ಸ್ವಾಗತ; ಜಿಗಜಿಣಗಿ

Published:
Updated:

ವಿಜಯಪುರ: ‘ರಮೇಶ ಜಾರಕಿಹೊಳಿ ಸೇರಿದಂತೆ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತವಿದೆ’ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ತಿಳಿಸಿದರು.

‘ಒಂದೂವರೆ ತಿಂಗಳಿನಿಂದ ಚುನಾವಣೆಯಲ್ಲಿ ತಲ್ಲೀನನಾಗಿದ್ದೆ. ಹೆಚ್ಚಿನ ಮಾಹಿತಿಯಿಲ್ಲ. ಬುಧವಾರದಿಂದ ಅತ್ತ ಗಮನಹರಿಸುವೆ’ ಎಂದು ಮಂಗಳವಾರ ಮುಸ್ಸಂಜೆ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಉರಿ ಬಿಸಿಲನ್ನು ಲೆಕ್ಕಿಸದೆ ಸರತಿಯಲ್ಲಿ ನಿಂತು ಮತ ಚಲಾಯಿಸಿದ ಮತದಾರರಿಗೆ ಕೃತಜ್ಞತೆಗಳು. ಮನೆ ಬಿಟ್ಟು ಪಕ್ಷದ ಗೆಲುವಿಗಾಗಿ ಶ್ರಮಿಸಿದ ನನ್ನ ಕಾರ್ಯಕರ್ತ ಪಡೆಗೆ ಅನಂತ ಧನ್ಯವಾದಗಳು. ಕ್ಷೇತ್ರದ ಎಲ್ಲೆಡೆಯೂ ಚಿಕ್ಕ ಗಲಾಟೆಗೆ ಆಸ್ಪದ ಕೊಡದಂತೆ ಚುನಾವಣಾ ಕರ್ತವ್ಯ ನಿಭಾಯಿಸಿದ ಅಧಿಕಾರಿ ವರ್ಗಕ್ಕೂ ನಮನಗಳು’ ಎಂದು ಜಿಗಜಿಣಗಿ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ ‘ವಿರೋಧಿಗಳ ಹಣದ ಹೊಳೆಯಲ್ಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅಹರ್ನಿಶಿ ದುಡಿದಿದ್ದಾರೆ. ಇದರ ಫಲವಾಗಿ ಗೆಲುವು ನಮ್ಮದೇ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮುಖಂಡರಾದ ವಿಜುಗೌಡ ಪಾಟೀಲ, ಪ್ರಮುಖ ಪದಾಧಿಕಾರಿಗಳಾದ ಡಾ.ಸುರೇಶ ಬಿರಾದಾರ, ಶಿವರುದ್ರ ಬಾಗಲಕೋಟ, ಪ್ರಕಾಶ ಅಕ್ಕಲಕೋಟ, ರವಿಕಾಂತ ಬಗಲಿ, ವಿವೇಕಾನಂದ ಡಬ್ಬಿ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !