ಭೀಕರ ದಾಳಿಗೆ ಸಾಕ್ಷಿಯಾದ ಪುಲ್ವಾಮದ ಸುತ್ತ ಏನೇನಿವೆ ಗೊತ್ತಾ?

ಶುಕ್ರವಾರ, ಮಾರ್ಚ್ 22, 2019
24 °C

ಭೀಕರ ದಾಳಿಗೆ ಸಾಕ್ಷಿಯಾದ ಪುಲ್ವಾಮದ ಸುತ್ತ ಏನೇನಿವೆ ಗೊತ್ತಾ?

Published:
Updated:

ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿರಿಸಿ ಜೈಷ್‌–ಎ–ಮೊಹಮದ್‌ ಸಂಘಟನೆಯ ಉಗ್ರರು ಫೆಬ್ರುವರಿ 14ರಂದು ನಡೆಸಿದ ಭೀಕರ ದಾಳಿಗೆ ಸಾಕ್ಷಿಯಾದ ಪುಲ್ವಾಮ ಜಮ್ಮು–ಕಾಶ್ಮೀರದಲ್ಲಿರುವ ಒಂದು ಜಿಲ್ಲೆ. ಅದ್ಭುತ ಪ್ರವಾಸಿ ತಾಣಗಳನ್ನು ತನ್ನೊಡಲಲ್ಲಿಟ್ಟುಕೊಂಡಿರುವ ಇದು ಅಪರೂಪದ ನದಿ-ಝರಿಗಳ ನಾಡು. ಮಂಜು ಸುರಿಯುವ ಬೀಡು. ಐತಿಹಾಸಿಕ ತಾಣಗಳಿರುವ ಪ್ರದೇಶ.

1979ರಲ್ಲಿ ಈ ಜಿಲ್ಲೆ ರಚನೆಯಾಗಿದೆ. ಈ ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳಿವೆ. ಸುಂದರ ಕಣಿವೆಯ ಭಾಗವಾಗಿರುವ ಪುಲ್ವಾಮ ಜಿಲ್ಲೆಯಲ್ಲಿ ತಾರ್ಸರ್–ಮಾರ್ಸರ್‌ನಂತಹ ಸರೋವರಗಳು, ದೇವಾಲಯ ಮತ್ತು ಚಾರಣದ ತಾಣಗಳಿವೆ. ಅಂತಹ ಪ್ರಮುಖ ಪ್ರವಾಸಿ ತಾಣಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಇದನ್ನೂ ಓದಿ: ಯೋಧರ ಹತ್ಯೆ: ಸೇಡಿಗಾಗಿ ತಹತಹ

ಅವಂತೀಶ್ವರ ದೇವಾಲಯ
ವಿಷ್ಣು ಮತ್ತು ಶಿವನ ದೇವಾಲಯ. ಈ ದೇವಾಲಯದ ಮೇಲೆ ಅಪರೂಪದ ಕೆತ್ತನೆಗಳಿವೆ. ಇದು 9ನೇ ಶತಮಾನದಲ್ಲಿ ನಿರ್ಮಾಣವಾದ ದೇವಾಲಯ. ಆಯತಾಕಾರದ ಅಂಗಳ, ನಡುವೆ ಗರ್ಭಗುಡಿ. ಮುಖ್ಯ ದೇವಾಲಯದ 4 ಮೂಲೆಗಳಲ್ಲಿ ನಾಲ್ಕು ಸಣ್ಣ ದೇವಾಲಯಗಳಿವೆ. ತೆರೆದ ಬದಿಗಳಿಂದ ಕೂಡಿದ ಒಂದು ಕಂಬದ ಮಂಟಪವಿದೆ. ಹಿಂದೆ ಈ ದೇವಾಲಯಗಳ ಮೇಲೆ ದಾಳಿ ನಡೆದಿರುವ ಕುರುಹುಗಳಿವೆ. ಇದೀಗ ಬರೀ ಅವಶೇಷಗಳಾಗಿ ಉಳಿದಿವೆ.


ಅವಂತೀಶ್ವರ ದೇವಾಲಯ (ಚಿತ್ರ: ಕುರುಂಬುಡೇಲು ರಾಮಕೃಷ್ಣ ಭಟ್‌ ಬೆಳ್ಳಾರೆ​)

ಪೇಯರ್ ಟೆಂಪಲ್
ಇದು ದೇವಾಲಯ. ಪುಲ್ವಾಮ ಜಿಲ್ಲಾ ಕೇಂದ್ರದಿಂದ ದಕ್ಷಿಣಕ್ಕೆ 3 ಕಿಮೀ ದೂರದಲ್ಲಿದೆ. ಪೇಯರ್ ಗ್ರಾಮದಲ್ಲಿ ಈ ದೇವಾಲಯ ಇರುವ ಕಾರಣ ಅದೇ ಹೆಸರಿನಿಂದ ಕರೆಯುತ್ತಾರೆ. ಇದು ಏಕಶಿಲಾ ಕಲ್ಲಿನಿಂದ ಕೆತ್ತಿರುವ ದೇವಸ್ಥಾನ ಎನ್ನುತ್ತಾರೆ. ಸುಮಾರು 10 ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಪುಲ್ವಾಮ ದಾಳಿ: ಗುಪ್ತಚರ ವೈಫಲ್ಯದ ವಿವರಗಳು

ಕೋನ್ಸರ್ ನಾಗ್‌ ಸರೋವರ
ಕೋನ್ಸರ್ ನಾಗ್‌ ಸರೋವರವು ಕಾಶ್ಮೀರದ ದಕ್ಷಿಣಕ್ಕೆ ಪಂಜಾಲ್ ಪರ್ವತಗಳ ನಡುವಿದೆ. ಬೇಸಿಗೆಯಲ್ಲೂ ಈ ಸರೋವರ ಹೆಪ್ಪುಗಟ್ಟುತ್ತದಂತೆ. ವಿಶಾವ್‌ಗೆ ಸುಮಾರು 3 ಕಿ.ಮೀ ಉದ್ದದ ಕೋನ್ಸರ್ ಸರೋವರದ ಮೂಲಕ ಹಾದು ಹೋಗುತ್ತದೆ. ಇದು ಬಿಜ್ಬೆರಾ ಕೆಳಗೆ ಝೀಲಂ ಸೇರುತ್ತದೆ. ಇದೊಂದು ಅತಿ ಸುಂದರ ಸರೋವರ.

ಇದನ್ನೂ ಓದಿ: ಯೋಧರಿಗೆ ಅಂತಿಮ ನಮನ ಸಲ್ಲಿಸಿ, ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ರಾಜನಾಥ ಸಿಂಗ್

ಅಹರ್ಬಾಲ್ ಜಲಪಾತ
ವಿಶಾವ್ ನದಿಯ ನೀರಿನಿಂದ ಸೃಷ್ಟಿಯಾಗುವ ಜಲಪಾತಗಳ ಪೈಕಿ ಇದೂ ಒಂದು. ಜಲಪಾತವು ದಟ್ಟ ಅರಣ್ಯದೊಳಗಿದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.


ಅಹರ್ಬಾಲ್ ಜಲಪಾತ (ಚಿತ್ರಕೃಪೆ:ವಿಕಿ ಕಾಮನ್ಸ್‌)

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !