ಅನ್ನ, ಪಾಯಸವಾಯ್ತು!

7

ಅನ್ನ, ಪಾಯಸವಾಯ್ತು!

Published:
Updated:
Deccan Herald

ನಮ್ಮದು ತುಂಬು ಸಂಸಾರ. ಹಾಗಾಗಿ ಅಕ್ಕಂದಿರ ವಿವಾಹದವರೆಗೂ ನಾನು ಅಡುಗೆ ಕೆಲಸಗಳತ್ತ ತಲೆಹಾಕುತ್ತಿರಲಿಲ್ಲ. ಅವರ ಮದುವೆಯಾದ ನಂತರ ಅಮ್ಮ ನನಗೆ ಅಡುಗೆ ಮಾಡಲು ಬಡ್ತಿ ನೀಡಿದರು.

ಅಂದಿನ ದಿನಗಳಲ್ಲಿ ಸೌದೆ ಒಲೆಯಲ್ಲಿಯೇ ಅಡುಗೆ ಮಾಡಬೇಕಾಗಿತ್ತು. ‘ಅನ್ನ ಬೆಂದಿರುವುದು ತಿಳಿಯಲು ಒಂದು ಅಗುಳು ನೋಡಿದರೂ ಸಾಕು’ ಎಂಬ ಮಾತು ಸಾಮಾನ್ಯವಾಗಿ ಕೇಳುತ್ತಲೇ ಇರುತ್ತೇವೆ. ಆದರೆ ನನಗೆ ಅನ್ನ ಬೆಂದಿದ್ದು ಗೊತ್ತಾಗುತ್ತಲೇ ಇರಲಿಲ್ಲ. ನಾನು ಇಡೀ ಅಗುಳುಗಳ ಸಂಕುಲವನ್ನೇ ಸೌಟಿನಲ್ಲಿ ತೆಗೆದು ನೋಡಿ ನೋಡಿ ಕಡೆಗೆ ಬಸಿಯುತ್ತಿದ್ದೆ. ಮೊದಲ ಸಲ ನಾನು ಮಾಡಿದ ಅನ್ನ ವಿಪರೀತ ಬೆಂದು ಪಾಯಸವಾಗಿ ಮಾರ್ಪಟ್ಟಿತ್ತು. ಬೆಲ್ಲ ಹಾಕಿದ್ದರೆ ಗಟಗಟನೆ ಕುಡಿಯಬಹುದಾಗಿತ್ತು. ಅಮ್ಮನ ಬೈಗುಳಕ್ಕೆ ಮಿತಿ ಇರಲಿಲ್ಲ.

ಅಡುಗೆಯ ಪ್ರಾಥಮಿಕ ಶಿಕ್ಷಣದಲ್ಲಿರುವಾಗಲೇ ನನ್ನ ಅಕ್ಕ ಶಕುಂತಲಾ ಚೊಚ್ಚಿಲ ಬಾಣಂತನವಾಯ್ತು. ಒಂದು ದಿನ ನನ್ನ ಭಾವ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ನಾನು ಅವರಿಗೆ ಊಟ ಬಡಿಸುತ್ತಿದ್ದೆ. ಅವರು, ‘ಪೂರ್ಣಿಮಾ, ನಿಮ್ ಮನೇಲಿ ಹುಣಿಸೆ ಮರವಿದೆಯಾ’ ಎಂದು ಗಂಭೀರವಾಗಿ ಪ್ರಶ್ನಿಸಿದರು. ನಾನು ಹೆಮ್ಮೆಯಿಂದ ಬೀಗುತ್ತಾ ತಂದೆಯವರ ಊರಿನಲ್ಲಿದೆ ಎಂದೆ. ಅವರು ಮರು ಮಾತನಾಡಲಿಲ್ಲ. ಊಟ ಮುಗಿದ ಬಳಿಕ, ಭಾವನ ಪ್ರಶ್ನೆಯ ಬಗ್ಗೆ ಅಕ್ಕನನ್ನು ವಿಚಾರಿಸಿದೆ. ಅಕ್ಕ ನಗುತ್ತಾ ‘ಏನಿಲ್ಲಾ ನೀನು ಸಾರಿಗೆ ಹುಳಿ ಜಾಸ್ತಿ ಹಾಕಿರೋದ್ರಿಂದ ಹಾಗೆ ಕೇಳರ‍್ಬೋದು’ ಎಂದರು.

ಬರಬರುತ್ತಾ ಅಡುಗೆಯ ಹದವನ್ನು ಸಮಗ್ರವಾಗಿ ಕಲಿತೆ. ನನಗೂ ಮದುವೆಯಾದ ಮೇಲೆ ಅತ್ತೆಯ ಮನೆಯ ಮೊದಲ ಅಡುಗೆಯಲ್ಲಿ
ಶಹಬಾಸ್‌ಗಿರಿ ಪಡೆದಿದ್ದೆ.

–ಪೂರ್ಣಿಮಾ ಮೂರ್ತಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !