ರಾಜಕೀಯ ಸೇರಿದರೆ 3ನೇ ಮಹಾಯುದ್ಧ: ಇಂದ್ರಾ ನೂಯಿ

7

ರಾಜಕೀಯ ಸೇರಿದರೆ 3ನೇ ಮಹಾಯುದ್ಧ: ಇಂದ್ರಾ ನೂಯಿ

Published:
Updated:

ನ್ಯೂಯಾರ್ಕ್‌ : ‘ನಾನು ಮುಕ್ತವಾಗಿ ಮಾತನಾಡುವುದರಿಂದಾಗಿ, ರಾಜಕೀಯ ಸೇರಿದರೆ ಮೂರನೇ ಮಹಾಯುದ್ಧವೇ ಆಗಬಹುದು’ ಎಂದು ಪೆಪ್ಸಿಕೊ ಮಾಜಿ ಸಿಇಒ ಇಂದ್ರಾ ನೂಯಿ ಹೇಳಿದ್ದಾರೆ. 

ಇಂದ್ರಾ ಅವರು ಉದ್ದಿಮೆಯಲ್ಲಿ ಮಾಡಿರುವ ಸಾಧನೆ, ವಿಶ್ವದಾದ್ಯಂತ ಮಹಿಳೆಯರ ಪರವಾಗಿ ಜಾಗೃತಿ ಮೂಡಿಸುತ್ತಿರುವ ಕಾರ್ಯಗಳನ್ನು ಗುರುತಿಸಿದ ಸ್ವಯಂ ಸೇವಾ ಸಂಸ್ಥೆ ‘ಏಷ್ಯಾ ಸೊಸೈಟಿ’, ಅವರಿಗೆ ‘ಗೇಮ್‌ ಚೇಂಜರ್ ಆಫ್‌ ದಿ ಇಯರ್’ ಪ್ರಶಸ್ತಿ ನೀಡಿ ಗೌರವಿಸಿತು. ಈ ವೇಳೆ ಇಂದ್ರಾ ಮಾತನಾಡಿದರು.

ನಿವೃತ್ತರಾಗಿರುವುದರಿಂದ ಈಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪುಟ ಸೇರಲು ಬಯಸುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ‘ನನಗೆ ಶಿಷ್ಟಾಚಾರ ಪಾಲಿಸಲು ಬರುವುದಿಲ್ಲ. ಹಾಗೆಂದರೇನು ಎಂದೇ ತಿಳಿದಿಲ್ಲ. ನನಗೂ ರಾಜಕೀಯಕ್ಕೂ ಆಗಿಬರುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. 

ಏಷ್ಯಾ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !