ಎಚ್‌–4 ವೀಸಾ ರದ್ದು ಪ್ರಸ್ತಾವ:ಸಾರ್ವಜನಿಕ ಅಭಿಪ್ರಾಯ ಸಂಗ್ರಹ

7

ಎಚ್‌–4 ವೀಸಾ ರದ್ದು ಪ್ರಸ್ತಾವ:ಸಾರ್ವಜನಿಕ ಅಭಿಪ್ರಾಯ ಸಂಗ್ರಹ

Published:
Updated:
Deccan Herald

ವಾಷಿಂಗ್ಟನ್‌: ಎಚ್‌–4 ವೀಸಾವನ್ನು ಹಿಂತೆಗೆದುಕೊಳ್ಳುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಅಭಿಪ್ರಾಯ ಪಡೆಯಲಾಗುವುದು ಎಂದು ಅಮೆರಿಕ ಸರ್ಕಾರ ಹೇಳಿದೆ. 

ಎಚ್‌–1 ವೀಸಾ ಹೊಂದಿರುವವರ ಸಂಗಾತಿಗೆ ಎಚ್‌–4 ವೀಸಾದಡಿ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶವಿದೆ. ಈ ಸೌಲಭ್ಯವನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಟ್ರಂಪ್‌ ಆಡಳಿತ ಚಿಂತನೆ ನಡೆಸಿದೆ. ಎಚ್‌–4 ವೀಸಾ ರದ್ದುಗೊಂಡರೆ ಸಾವಿರಾರು ಭಾರತೀಯರ ಮೇಲೆ ಪರಿಣಾಮ ಬೀರಲಿದೆ. ಭಾರತೀಯ ಐಟಿ ತಂತ್ರಜ್ಞರನ್ನು ಎಚ್‌–1 ವೀಸಾದಡಿ ನೇಮಕ ಮಾಡಿಕೊಳ್ಳಲು ಅಮೆರಿಕದ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಸರ್ಕಾರ ಅವಕಾಶ ನೀಡಿದೆ. ಈ ನೌಕರರ ಸಂಗಾತಿ ಅಥವಾ 21 ವರ್ಷದೊಳಗಿನ ಮಕ್ಕಳಿಗೆ ಎಚ್‌–4 ವೀಸಾವನ್ನು ನೀಡಲಾಗುತ್ತಿದೆ. ಇವರಿಗೂ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ.

ಆದರೆ, ಟ್ರಂಪ್‌ ಸರ್ಕಾರವು ಎಚ್‌–4 ವೀಸಾ ಹೊಂದಿರುವವರಿಗೆ ನೀಡಲಾಗಿರುವ ಉದ್ಯೋಗ ಹಕ್ಕನ್ನು ಹಿಂತೆಗೆದುಕೊಳ್ಳಲು ಚಿಂತಿಸಿದೆ. ಇದರಿಂದ ಎಚ್‌–4 ವೀಸಾದಡಿ ಉದ್ಯೋಗ ಪರವಾನಗಿ ಪಡೆದಿರುವ 70,000 ನೌಕರರ ಮೇಲೆ ಪರಿಣಾಮ ಉಂಟಾಗಲಿದೆ. ಈ ಕುರಿತು 2019ರ ಜನವರಿಗೆ ಹೊಸ ಪ್ರಸ್ತಾವ ಸಲ್ಲಿಸಲಿದ್ದು, ಸಾರ್ವಜನಿಕರ ಅಭಿಪ್ರಾಯ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಅದು ಹೇಳಿದೆ. 

ಎಚ್‌–4 ವೀಸಾವನ್ನು ರದ್ದುಗೊಳಿಸಬಾರದು ಎಂದು ಇಬ್ಬರು ಸಂಸದರು ಟ್ರಂಪ್‌ಗೆ ಮನವಿ ಮಾಡಿದ್ದಾರೆ. 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !