ಸೋಮವಾರ, ಆಗಸ್ಟ್ 26, 2019
21 °C
ಮೂರು ದಿನಗಳ ವೈನ್ ಮೇಳ ಚಾಲನೆ

ಮದಿರೆಯ ಕಿಕ್ ಹೆಚ್ಚಿಸಿದ ಸಂಗೀತ ಸಂಜೆ

Published:
Updated:
Prajavani

ಬೆಂಗಳೂರು: ಮೂರು ದಿನಗಳ ಅಂತರರಾಷ್ಟ್ರೀಯ ದ್ರಾಕ್ಷಾರಸ ಉತ್ಸವಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ವಿವಿಧ ಬಗೆಯ ವೈನ್ ಸವಿದ ನಗರದ ಜನತೆ ಸಂಗೀತ ಸಂಜೆಯಲ್ಲಿ ತೇಲಾಡಿದರು. 

ಕರ್ನಾಟಕ ವೈನ್‌ ಮಂಡಳಿಯು ಜಯಮಹಲ್ ಆರಮನೆ ಹೋಟೆಲ್ ಆವರಣದಲ್ಲಿ ಆಯೋಜಿಸಿರುವ ಮೇಳವು  ವೈನ್‌ ಪ್ರಿಯರಿಗೆ ಮುದ ನೀಡಿತು.  ದ್ರಾಕ್ಷಾರಸ ತಯಾರಿಕೆ, ಬಂದವರಿಗೆ ದ್ರಾಕ್ಷಾ ರಸದ ಬಗ್ಗೆ ಮಾಹಿತಿ ನೀಡಲಾಯಿತು. 

ಗ್ರೋವರ್, ಬಿಗ್ ಬನ್ಯಾನ್, ಬ್ಲಾಕ್ ಬಕ್, ಮಧುಲೋಕ, ನಿಸರ್ಗ, ಕಾಡು, ಎಲೈಟ್, ಕಿನ್ವಾಹ್, ಸೋಮ ಸೇರಿದಂತೆ ರಾಜ್ಯದ 15 ದ್ರಾಕ್ಷಾರಸ ಮಳಿಗೆಗಳು ಮೇಳದಲ್ಲಿವೆ.

‘ಅಂತರರಾಷ್ಟ್ರೀಯ ದ್ರಾಕ್ಷಾರಸ ಉತ್ಸವಗಳು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಅವಕಾಶ ಮಾಡಿಕೊಟ್ಟಿದೆ. 2007ರಲ್ಲಿ ₹60 ಲಕ್ಷಕ್ಕೆ ಸೀಮಿತವಾಗಿದ್ದ ದ್ರಾಕ್ಷಾರಸ ಉದ್ಯಮ ಇದೀಗ ₹200 ಕೋಟಿಗೆ ತಲುಪಿದೆ. ಇಂತಹ ಉತ್ಸವಗಳಿಗೆ ಸಾರ್ವಜನಿಕರಿಂದ ಮತ್ತಷ್ಟು ಬೆಂಬಲ ಸಿಗಬೇಕು’ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು ತಿಳಿಸಿದರು. 

Post Comments (+)