ತಲೆ ಮೇಲೆ ಇಟ್ಟಿಗೆ ಬಿದ್ದು ಮಹಿಳೆ ಸಾವು

ಬುಧವಾರ, ಏಪ್ರಿಲ್ 24, 2019
27 °C

ತಲೆ ಮೇಲೆ ಇಟ್ಟಿಗೆ ಬಿದ್ದು ಮಹಿಳೆ ಸಾವು

Published:
Updated:

ಬೆಂಗಳೂರು: ಕಟ್ಟಡ ನಿರ್ಮಾಣದ ವೇಳೆ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಬಿದ್ದು ಕಲಬುರ್ಗಿಯ ಮಲ್ಲಮ್ಮ (28) ಎಂಬುವರು ಮೃತಪಟ್ಟು, ಅವರ ತಮ್ಮ ಮಲ್ಲೇಶ್ ಗಾಯಗೊಂಡಿದ್ದಾರೆ.

ಯಲಹಂಕದ ಕೋಗಿಲು ಲೇಔಟ್‌ನಲ್ಲಿ ಶನಿವಾರ ‌ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಮಲ್ಲಮ್ಮ, ಅವರ ಪತಿ ಮೈಲಾರಿ, ಸೋದರ ಮಲ್ಲೇಶ್ ಸೇರಿದಂತೆ ಕಲಬುರ್ಗಿಯ ಹತ್ತಕ್ಕೂ ಹೆಚ್ಚು ಮಂದಿ ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು. ಸಂಪಿಗೆಹಳ್ಳಿಯಲ್ಲಿ ವಾಸವಿದ್ದ ಅವರು, ಮಹಮದ್ ರಫೀಕ್ ಎಂಬುವರು ನಿರ್ಮಿಸುತ್ತಿರುವ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಸಿಮೆಂಟ್ ಇಟ್ಟಿಗೆಗಳನ್ನು 1ನೇ ಮಹಡಿಗೆ ಸಾಗಿಸುತ್ತಿದ್ದಾಗ ಹಗ್ಗ ತುಂಡಾಗಿ ಇಟ್ಟಿಗೆಗಳು ಕೆಳಗೆ ಬಿದ್ದವು. ಒಂದು ಮಲ್ಲಮ್ಮ ಅವರ ತಲೆ ಮೇಲೆ ಬಿದ್ದರೆ, ಇನ್ನೊಂದು ಮಲ್ಲೇಶ್ ಮೇಲೆ ಬಿದ್ದಿತು. ಸಹಕಾರ್ಮಿಕರು ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರಾದರೂ, ಮಲ್ಲಮ್ಮ ಸ್ವಲ್ಪ ಸಮಯದಲ್ಲೇ ಕೊನೆಯುಸಿರೆಳೆದರು.

‘ರಫೀಕ್ ಹಾಗೂ ಮೇಸ್ತ್ರಿ ಸೈಯದ್ ಶಫೀವುಲ್ಲಾ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭಾನುವಾರ ತಾವೇ ಠಾಣೆಗೆ ಶರಣಾಗುವುದಾಗಿ ಅವರು ಹೇಳಿದ್ದಾರೆ’ ಎಂದು ‍ಪೊಲೀಸರು ಹೇಳಿದರು. 

ಕಾಂಪೌಂಡ್ ಕುಸಿದು ಇಬ್ಬರ ದುರ್ಮರಣ
ಬೆಂಗಳೂರು
: ಪುಲಕೇಶಿನಗರ ಸಮೀಪದ ಸ್ಪೆನ್ಸರ್ ರಸ್ತೆಯಲ್ಲಿ ರಾಜಕಾಲುವೆ ಕಾಮಗಾರಿ ವೇಳೆ ಅಪಾರ್ಟ್‌ಮೆಂಟ್ ಸಮುಚ್ಚಯದ ಕಾಂಪೌಂಡ್ ಕುಸಿದು ಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ.

ಶನಿವಾರ ಸಂಜೆ 5.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಮೃತರನ್ನು ಸುದರ್ಶನ್ ಹಾಗೂ ಶಫೀಕ್ ಎಂದು ಗುರುತಿಸಲಾಗಿದೆ. ನಗರದ ಕೆಲವೆಡೆ ಬಿಬಿಎಂಪಿ ರಾಜಕಾಲುವೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದೆ. ಅಂತೆಯೇ ಜಾರ್ಖಂಡ್‌ನ ಹತ್ತಕ್ಕೂ ಹೆಚ್ಚು ಕಾರ್ಮಿಕರು ಸೆನ್ಸರ್ ರಸ್ತೆಯ ಕಾಲುವೆ ದುರಸ್ತಿಯಲ್ಲಿ ತೊಡಗಿದ್ದರು.

ರಾಜಕಾಲುವೆ ಪಕ್ಕದಲ್ಲೇ ಅಪಾರ್ಟ್‌ಮೆಂಟ್‌ ಸಮುಚ್ಚಯದ ಕಾಂಪೌಂಡ್ ಇದೆ. ಸಂಜೆ ಜೆಸಿಬಿ ಮೂಲಕ ಕಾಲುವೆ ಅಗೆಸಲಾಗಿತ್ತು. ಆ ನಂತರ ಕಾರ್ಮಿಕರು ಕಾಲುವೆಗೆ ಇಳಿದು ಕಾಂಕ್ರೀಟ್ ಹಾಕುವ ಕೆಲಸದಲ್ಲಿ ತೊಡಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !