ಮಹಿಳೆಯರ ಗೆಲುವಿನ ಪ್ರಮಾಣ ಕುಸಿತ

ಶನಿವಾರ, ಮಾರ್ಚ್ 23, 2019
24 °C

ಮಹಿಳೆಯರ ಗೆಲುವಿನ ಪ್ರಮಾಣ ಕುಸಿತ

Published:
Updated:

ಬೆಂಗಳೂರು: ಕರ್ನಾಟಕದ ಚುನಾವಣೆಗಳಲ್ಲಿ ಮಹಿಳೆಯರ ಸ್ಪರ್ಧೆಯ ಪ್ರಮಾಣ ಹೆಚ್ಚಾಗಿದ್ದರೂ ಅವರು ಗೆಲ್ಲುತ್ತಿರುವುದು ಕಡಿಮೆಯಾಗಿದೆ. 1957ರಲ್ಲಿ ಸ್ವರ್ಧಿಸುವವರ ಪ್ರಮಾಣ ಕಡಿಮೆ ಇದ್ದರೂ ಗೆಲ್ಲುವವರು ಹೆಚ್ಚಾಗಿದ್ದರು.

ಮಹಿಳೆಯರು 1957ರಲ್ಲಿ ಶೇ 54ರಷ್ಟು ಪ್ರಮಾಣದಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿ ವಿಜೇತರಾಗುತ್ತಿದ್ದರು. ಅದು 2018ರ ಚುನಾವಣೆಯಲ್ಲಿ ಕೇವಲ ಶೇ 4ಕ್ಕೆ ಕುಸಿತ ಕಂಡಿದೆ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಮಹಿಳಾ ಸಬಲೀಕರಣ’ ಕುರಿತು ಬಿ-ಪ್ಯಾಕ್‍ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಗೊತ್ತಾಗಿದೆ.. ಸಂಸ್ಥೆಯ ರೇವತಿ ಅಶೋಕ್ ಮತ್ತು ಎಂ.ವಿ.ಅರ್ಚನಾ ಅವರು ಸಮೀಕ್ಷೆ ನಡೆಸಿದವರು.

‘ಪಾಲಿಕೆ, ರಾಜ್ಯಸಭಾ, ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ 1957ರಿಂದ ಇಲ್ಲಿಯವರೆಗೂ ಸ್ಪರ್ಧಿಸಿರುವ ಮಹಿಳೆಯರ ಸಂಖ್ಯೆ ಮತ್ತು ಅವರು ಗೆಲವು ಸಾಧಿಸಿದ ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂದು ಸಂಶೋಧನಾ ಸಂಯೋಜಕಿ ಎಂ.ವಿ.ಅರ್ಚನಾ ತಿಳಿಸಿದರು.

‘ಕರ್ನಾಟಕದಲ್ಲಿ ಅಲ್ಲದೆ ಬಿಹಾರ, ಉತ್ತರ ಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿಯೂ ಸ್ಪರ್ಧಿಸುವವರ ಸಂಖ್ಯೆ ಅಧಿಕವಾಗಿದೆ. ಆದರೆ, ಸ್ಪರ್ಧಿಸಿದ ಅರ್ಧದಷ್ಟು ಮಂದಿಯೂ ಗೆಲುವು ಸಾಧಿಸುತ್ತಿಲ್ಲ’ ಎಂದು ಅವರು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಪ್ರಾತಿನಿಧ್ಯತೆ ದೊರೆಯುವಂತಾಗಬೇಕು. ಎಲ್ಲಾ ಪಕ್ಷಗಳು ಮಹಿಳೆಯರಿಗೆ ಮೀಸಲಿಟ್ಟ ಶೇಕಡವಾರು ಮೀಸಲಾತಿಯ ವರದಿ ಕೊಡುವಂತೆ ಚುನಾವಣಾ ಆಯೋಗವು ಸೂಚನೆ ನೀಡಬೇಕು ಎಂದು ‘ಬಿ ಪ್ಯಾಕ್‌ ಸಂಸ್ಥೆ’ಯ ಸದಸ್ಯರು ಒತ್ತಾಯಿಸಿದ್ದಾರೆ. 

ಮಹಿಳೆಯರಿಗೆ ಕಾರ್ಯಾಗಾರ: ಪರಿಸರ ಮತ್ತು ಸರ್ಕಾರಿ ಶಾಲೆಗಳ ರಕ್ಷಣೆ, ಚುನಾವಣೆಗಳಲ್ಲಿ ಮಹಿಳೆಯರ ಪಾತ್ರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಂಸ್ಥೆಯಿಂದ ಭಾರತೀಯ ವಿದ್ಯಾಭವನದಲ್ಲಿ ಬುಧವಾರ ಆಯೋಜಿ
ಸಿದ್ದ ಮಹಿಳೆಯರಿಗೆ ಕಾರ್ಯಾಗಾರದಲ್ಲಿ ಜಾಗೃತಿ ಮೂಡಿಸಲಾಯಿತು.

ಮಾಜಿ ಮುಖ್ಯಮಂತ್ರಿ ದಿ. ಕೆ.ಸಿ.ರೆಡ್ಡಿ ಮೊಮ್ಮಗಳು ವಸಂತ ಕವಿತಾ ರೆಡ್ಡಿ, ‘ಮಹಿಳೆಯರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಲು ಮತ್ತು ರಾಜಕೀಯ ವಿಚಾರಗಳನ್ನು ಹಂಚಿಕೊಳ್ಳಲು ಬಿ-ಪ್ಯಾಕ್ ವೇದಿಕೆ ಸಹಕಾರಿಯಾಗಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !