ಸ್ನೇಹಿತನ ಪತ್ನಿಯ ನಗ್ನ ವಿಡಿಯೊ ಹರಿಬಿಟ್ಟ

7

ಸ್ನೇಹಿತನ ಪತ್ನಿಯ ನಗ್ನ ವಿಡಿಯೊ ಹರಿಬಿಟ್ಟ

Published:
Updated:

ಬೆಂಗಳೂರು: ಸ್ನೇಹಿತನ ಪತ್ನಿಯ ಮೇಲೆ ಕಣ್ಣು ಹಾಕಿದ್ದ ಕಿಶೋರ್‌ ಎಂಬಾತ, ಅವರ ನಗ್ನ ವಿಡಿಯೊ ಹಾಗೂ ಫೋಟೊಗಳನ್ನು ಅಂತರ್ಜಾಲದಲ್ಲಿ ಅಪ್‌ಲೋಡ್‌ ಮಾಡಿದ್ದಾನೆ ಎನ್ನಲಾಗಿದೆ. ಆ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘34 ವರ್ಷದ ಮಹಿಳೆ ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಮತ್ತು ಜೀವ ಬೆದರಿಕೆವೊಡ್ಡಿದ ಆರೋಪದಡಿ ಕಿಶೋರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆತ ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಸಂತ್ರಸ್ತೆಯು ಪತಿ ಹಾಗೂ ಮಕ್ಕಳ ಜೊತೆಯಲ್ಲಿ ವಾಸವಿದ್ದಾರೆ. ಪತಿಯ ಸ್ನೇಹಿತನಾಗಿದ್ದ ಕಿಶೋರ್, ಆಗಾಗ ಮನೆಗೆ ಬಂದು ಹೋಗುತ್ತಿದ್ದ. ವರ್ಷದ ಹಿಂದೆ ಮಹಿಳೆ ಒಬ್ಬಂಟಿಯಾಗಿದ್ದ ವೇಳೆ ಆತ ಮನೆಗೆ ಬಂದಿದ್ದ. ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೊ ಹಾಗೂ ಫೋಟೊಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ’ 

‘ಅದೇ ವಿಡಿಯೊ ಹಾಗೂ ಪೋಟೊಗಳನ್ನು ಮಹಿಳೆಗೆ ತೋರಿಸಿದ್ದ ಆರೋಪಿ, ‘ನಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ, ನಿನ್ನ ಈ ನಗ್ನ ವಿಡಿಯೊ ಹಾಗೂ ಫೋಟೊಗಳನ್ನು ಫೇಸ್‌ಬುಕ್, ವಾಟ್ಸ್‌ಆ್ಯಪ್ ಹಾಗೂ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುತ್ತೇನೆ’ ಎಂದು ಬೆದರಿಸಲಾರಂಭಿಸಿದ್ದ. ಅದಕ್ಕೆ ಮಹಿಳೆ ಒಪ್ಪಿರಲಿಲ್ಲ’ ಎಂದರು.

‘ಜ. 13ರಂದು ರಾತ್ರಿ ಮನೆಗೆ ನುಗ್ಗಿದ್ದ ಕಿಶೋರ್, ‘ನನ್ನ ಜೊತೆ ಬಾ’ ಎಂದು ಕೈ ಹಿಡಿದು ಎಳೆದಾಡಿದ್ದ. ಅದೇ ವೇಳೆ ಮನೆಗೆ ಬಂದಿದ್ದ ಪತಿಗೂ ವಿಷಯ ಗೊತ್ತಾಗಿತ್ತು. ಅವರೇ ಆತನನ್ನು ಮನೆಯಿಂದ ಹೊರಗೆ ಕಳುಹಿಸಿದ್ದರು’ ಎಂದು ಪೊಲೀಸರು ವಿವರಿಸಿದರು.

ಸಂಬಂಧಿಕರಿಗೆ ವಿಡಿಯೊ ಕಳುಹಿಸಿದ್ದ: ‘ಮಹಿಳೆ ತನ್ನ ಜೊತೆ ಬರಲಿಲ್ಲವೆಂದು ಸಿಟ್ಟಾಗಿದ್ದ ಆರೋಪಿ, ಅವರ ನಗ್ನ ವಿಡಿಯೊ ಹಾಗೂ ಫೋಟೊಗಳನ್ನು ಅಂತರ್ಜಾಲದಲ್ಲಿ ಅಪ್‌ಲೋಡ್‌ ಮಾಡಿದ್ದ. ಅದರ ಲಿಂಕ್‌ನ್ನು ಮಹಿಳೆ ಹಾಗೂ ಸಂಬಂಧಿಕರಿಗೆ ಕಳುಹಿಸಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಹಲವು ವರ್ಷಗಳಿಂದ ಆರೋಪಿ, ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಮರ್ಯಾದೆಗೆ ಅಂಜಿ ಮಹಿಳೆ ಪತಿಗೆ ವಿಷಯ ತಿಳಿಸಿರಲಿಲ್ಲ. ಈಗ ದೂರು ನೀಡಿದ್ದು, ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !