ಗುರುವಾರ, 21 ಮೇ 2026
×
ADVERTISEMENT

Child psychology: ಮಕ್ಕಳ ಮುದ್ದುಎಐ ಮಾಮ್!

Published : 24 ಏಪ್ರಿಲ್ 2026, 23:01 IST
Last Updated : 24 ಏಪ್ರಿಲ್ 2026, 23:01 IST
ADVERTISEMENT
ಫಾಲೋ ಮಾಡಿ
Comments
ಅಮ್ಮನ ಅನುಪಸ್ಥಿತಿಯಲ್ಲಿ ತನ್ನೆಲ್ಲಾ ಪ್ರಶ್ನೆಗಳಿಗೆ ಅಮ್ಮನಂತೆಯೇ ಉತ್ತರ ನೀಡಬಲ್ಲ ‘ಎಐ ಅಸಿಸ್ಟೆಂಟ್‌’ಗಳ ಮೇಲೆ ಈಗಿನ ಮಕ್ಕಳು ತುಸು ಹೆಚ್ಚೇ ಅವಲಂಬಿತರಾಗುತ್ತಿದ್ದಾರೆ. ಅವನ್ನು ಒಂದು ಮಾಹಿತಿಯ ಕಣಜವಾಗಿಯಷ್ಟೇ ಬಳಸಿಕೊಳ್ಳದೆ, ಅವುಗಳೊಂದಿಗೆ ಭಾವನಾತ್ಮಕ ನಂಟು ಬೆಳೆಸಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ; ಹೀಗಾಗಿ, ಎಐ ಜೊತೆಗೆ ಮಕ್ಕಳನ್ನು ಜೋಡಿಸುವಾಗ ಎಚ್ಚರವಿರಲಿ ಎನ್ನುತ್ತಾರೆ ತಜ್ಞರು.
ಬಳಸಿದಂತೆ ದಕ್ಕುತ್ತದೆ ಎಐ ಒಂದು ಡಿಜಿಟಲ್ ಮಾಧ್ಯಮ. ಅದನ್ನು ಹೇಗೆ ಬಳಸಿಕೊಳ್ಳಬೇಕು, ಎಷ್ಟು ಬಳಸಿಕೊಳ್ಳಬೇಕು ಎನ್ನುವ ವಿವೇಕವನ್ನು ಮಕ್ಕಳಲ್ಲಿ ಬೆಳೆಸಬೇಕು. ಈ ಡಿವೈಸ್ ಮಕ್ಕಳಿಗೆ ಸೂಕ್ತವಾದ, ಸುರಕ್ಷಿತ ಮಾಹಿತಿಯನ್ನು ಮಾತ್ರ ನೀಡುವಂತೆ ಹಾಗೂ ಸೆಕ್ಸ್, ಹಿಂಸೆ, ಅಕ್ರಮ, ಕಾನೂನುಬಾಹಿರ ವಿಷಯಗಳಿಗೆ ಪ್ರತಿಕ್ರಿಯಿಸದಂತೆ ನಿಯಂತ್ರಿಸಬಹುದು. ಯಾವ ಕಾರಣಕ್ಕೂ ಮಗು ಭಾವನಾತ್ಮಕ ವಿಚಾರಗಳ ಬಗ್ಗೆ ಇಂತಹ ಸಾಧನಗಳ ಮೊರೆ ಹೋಗದಂತೆ ತಿಳಿಹೇಳಬೇಕು. ಯಾವುದೇ ಪರಿಸ್ಥಿತಿಯನ್ನು ಪೋಷಕರ ಎದುರು ಹೇಳಿಕೊಳ್ಳುವ ವಾತಾವರಣವನ್ನು ಸೃಷ್ಟಿಸಬೇಕು. ಎಐ ಅಸಿಸ್ಟೆಂಟ್ ಅಮ್ಮನ ಸ್ಥಾನ, ಗೆಳತಿ/ಗೆಳೆಯರ ಸ್ಥಾನ, ಶಿಕ್ಷಕರ ಸ್ಥಾನವನ್ನು ತುಂಬಲು ಸಾಧ್ಯವೇ ಇಲ್ಲ. ಇದು ಆಯಾ ಪಾತ್ರಗಳಿಗೆಪರ್ಯಾಯವೂ ಅಲ್ಲ.
ಡಾ. ಆಶಾ ಎಚ್.ಎನ್., ಮಕ್ಕಳ ಮಾನಸಿಕ ತಜ್ಞೆ
ಮುಂದಿದೆ ಭ್ರಮಾಲೋಕ ಇದೊಂದು ಸತ್ಯವಲ್ಲದ, ಅಸ್ತಿತ್ವದಲ್ಲಿ ಇರದ, ಕೈಗೆ ನಿಲುಕದ ಭ್ರಮಾಲೋಕವನ್ನು ಸೃಷ್ಟಿಸಬಲ್ಲ ಯಂತ್ರ. ನಿಮ್ಮ ಅಗತ್ಯಗಳನ್ನು, ಮನಃಸ್ಥಿತಿಯನ್ನು, ಸಂದರ್ಭಗಳನ್ನು ಅರ್ಥೈಸಿಕೊಂಡು, ನಿಮಗೆ ಏನು ಬೇಕೋ ಅದನ್ನು ಒದಗಿಸಿದಂಥ ಭ್ರಮೆ ಹುಟ್ಟಿಸುತ್ತದೆ. ಅದರ ವ್ಯಾಪ್ತಿ ಬಹಳ ದೊಡ್ಡದು. ಆದರೆ, ಮಕ್ಕಳ ಜ್ಞಾನದ ಲೋಕ ಮತ್ತು ಅನುಭವಕ್ಕೆ ಒಂದು ಮಿತಿ ಇದೆ. ಅವರ ಮನಸ್ಸು ಅಷ್ಟೇ ಸೂಕ್ಷ್ಮವಾದುದು. ಮಕ್ಕಳ ಬಗ್ಗೆ ಅದಕ್ಕೆ ಕಾಳಜಿಯಾಗಲಿ, ಭಾವನೆಗಳಾಗಲಿ ಇರುವುದಿಲ್ಲ. ಆದರೆ ಅವರಿಗೆ ಖುಷಿಯಾಗುವಂತೆ ಸಂವಹನ ಮಾಡುತ್ತದೆ. ಅವರಲ್ಲಿ ಸಂಬಂಧಗಳ ಬಗೆಗೆ ಭ್ರಮೆಗಳನ್ನು ಹುಟ್ಟಿಸುತ್ತದೆ. ಅತಾರ್ಕಿಕ ನಿರೀಕ್ಷೆಗಳನ್ನು ಬೆಳೆಸುತ್ತದೆ. ಎಐ ಜೊತೆ ಸಂಭಾಷಣೆ ನಡೆಸುತ್ತಾ ಅದರಿಂದ ಬಂದ ಪ್ರತಿಕ್ರಿಯೆ ಮೇರೆಗೆ ಮಕ್ಕಳು ಅತಿರೇಕದ ಕೃತ್ಯಗಳನ್ನು ಎಸಗಿದಂತಹ ಉದಾಹರಣೆಗಳು ಬಹಳಷ್ಟಿವೆ. ಹೀಗಾಗಿ, ಮಕ್ಕಳನ್ನು ಎಐ ಜೊತೆ ಜೋಡಿಸುವ ಮುನ್ನ ಪೋಷಕರು ಎಚ್ಚರಿಕೆಯಿಂದ ಇರಬೇಕು.
ಕವಿತಾ ರತ್ನ, ಮಕ್ಕಳ ಹಕ್ಕುಗಳ ಕಾರ್ಯಕರ್ತೆ
ನಿಯಂತ್ರಣವೇ ಸದ್ಯದ ಪರಿಹಾರ ಈ ವಿಷಯ ಸ್ವಲ್ಪ ಸೂಕ್ಷ್ಮವಾದುದು. ಎಐ ವಾಯ್ಸ್ ಅಸಿಸ್ಟೆಂಟ್‌ಗಳಿಗೆ ವಿಶೇಷವಾದ ಸಮಗ್ರ ಕಾನೂನು ಇಲ್ಲ. ಆದರೆ ಅವುಗಳ ಬಳಕೆಯಿಂದ ಹಾನಿ ಅಥವಾ ಅಪರಾಧ ಸಂಭವಿಸಿದರೆ, ಇತ್ತೀಚಿನ ಕಾನೂನುಗಳ ಮೂಲಕ ಅವುಗಳನ್ನು ಪರೋಕ್ಷವಾಗಿ ನಿಯಂತ್ರಿಸಲಾಗುತ್ತದೆ. ಆದರೆ, ಪೋಷಕರ ನಿಯಂತ್ರಣವೇ ಸದ್ಯಕ್ಕೆ ಇರುವ ಪರಿಹಾರ.
ಅಂಜಲಿ ರಾಮಣ್ಣ, ವಕೀಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT