ಚೊಚ್ಚಲ ಗರ್ಭಿಣಿ, ಅಪ್ಪ– ಅಮ್ಮ, ಅತ್ತೆ– ಮಾವ, ಬಂಧು ಬಳಗ ಎಲ್ಲರಿಗೂ ಆಹ್ವಾನ ನೀಡಿ ಅದ್ಧೂರಿಯಾಗಿ ಸೀಮಂತ ಸಮಾರಂಭ ಆಚರಿಸಿಕೊಳ್ಳಬೇಕು ಎಂಬ ಹಂಬಲ. ದಿನ ನಿಗದಿಪಡಿಸಿ ಎಲ್ಲರಿಗೂ ಆಹ್ವಾನ ನೀಡಲಾಯಿತು. ಅಷ್ಟರಲ್ಲಿ ಪಶ್ಚಿಮಏಷ್ಯಾ ಯುದ್ಧ ಆರಂಭ. ಯುದ್ಧ ನಿಲ್ಲುವ ಲಕ್ಷಣ ಕಾಣಲಿಲ್ಲ. ಮುನ್ಸೂಚನೆ ಇಲ್ಲದೆ ತಕ್ಷಣ ವಿಮಾನಗಳ ರದ್ದು. ಎಲ್ಲರಿಗೂ ಆತಂಕ, ನಿರಾಸೆ. ‘ಭಾರತದಿಂದ ಬಂಧುಗಳು ಯಾರೂ ಬಾರದೆ ಸಮಾರಂಭ ಹೇಗೆ ಆಚರಿಸಿಕೊಳ್ಳಲಿ, ನನ್ನಂತಹ ದುರದೃಷ್ಟೆ ಇನ್ನೊಬ್ಬರಿಲ್ಲ’ ಎಂದು ಆ ಗರ್ಭಿಣಿಯ ಕಣ್ಣಾಲಿಗಳು ತುಂಬಿ ಬಂದವು. ಆಹ್ವಾನಿಸಿದ್ದವರಿಗೆಲ್ಲ ‘ಸಮಾರಂಭ ರದ್ದಾಗಿದೆ’ ಎಂದು ತಿಳಿಸಲಾಯಿತು. ಆಗ ಆಕೆಗೆ ಆದ ನೋವು, ಆತಂಕ, ನಿರಾಸೆ ಕಂಡು ಭರವಸೆ ನೀಡಿದ್ದು ಹೊರನಾಡ ಕನ್ನಡಿಗರು.

ಸುಮಾರು ಅರವತ್ತಕ್ಕೂ ಹೆಚ್ಚು ಕುಟುಂಬಗಳ ಮಹಿಳೆಯರು ಸಾಂತ್ವನ ಹೇಳಿ, ‘ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸೋಣ, ನಾವೆಲ್ಲರೂ ನಿಮ್ಮ ಜೊತೆಗೆ ಇದ್ದೇವೆ. ವಿವಿಧ ಭಕ್ಷ್ಯಗಳನ್ನು ತಯಾರು ಮಾಡುತ್ತೇವೆ, ಸಂತೋಷವಾಗಿರಿ’ ಎಂದು ಅಭಯ ನೀಡಿದರು.

ಇದು ಸಾವಿರಾರು ಕಿ.ಮೀ. ದೂರದ ಕೆನಡಾ ದೇಶದಲ್ಲಿನ ಲಾವೆಲ್ಲ ಪ್ರದೇಶದಲ್ಲಿ, ಉದ್ಯೋಗ ನಿಮಿತ್ತ ವಾಸವಾಗಿರುವ ತಾರಾ– ವೀರೇಶ್ ದಂಪತಿಯ ಮನೆಯಲ್ಲಿ ನಡೆದ ಘಟನೆ. ಸಮಾರಂಭದ ದಿನ ಹತ್ತಿರ ಬರತೊಡಗಿದಾಗ ದಂಪತಿಗೆ ಸಮಾರಂಭ ಯಶಸ್ವಿಯಾಗುವುದೋ ಇಲ್ಲವೋ ಎಂಬ ಆತಂಕ ಶುರುವಾಯಿತು. ಬಂಧು– ಬಳಗ ಯಾರೂ ಇಲ್ಲ, ದೇವರೇ ಕಾಪಾಡಬೇಕು ಎಂದು ದೈವಕ್ಕೆ ಶರಣಾದರು.

ಆಯೋಜಿಸಿದ ದಿನದಂದು ಮುಂಜಾನೆ ಅನಿವಾಸಿ ಕನ್ನಡಿಗರೆಲ್ಲ ಅಡುಗೆ ಮಾಡಲು ಸ್ಟೌ, ಪಾತ್ರೆಗಳು, ದಿನಸಿ ಸಾಮಾನು, ಊಟದ ತಟ್ಟೆ, ಲೋಟ, ವಿವಿಧ ಬಗೆಯ ಸಿಹಿತಿಂಡಿಗಳೊಂದಿಗೆ ನಿಗದಿತ ಸ್ಥಳಕ್ಕೆ ಬಂದಾಗ, ದಂಪತಿಯ ಮೊಗದಲ್ಲಿ ಹರ್ಷ ಮನೆಮಾಡಿತು. ಎಲ್ಲ ಮಹಿಳೆಯರು ಸರಸರನೆ ಸೀರೆಯನ್ನು ಸೊಂಟಕ್ಕೆ ಸಿಕ್ಕಿಸಿ, ಕಾಯಿ ಹೋಳಿಗೆ, ಕಾರದ ಹೋಳಿಗೆ, ಚಪಾತಿ, ದಾಲ್, ಅನ್ನ ಸಾಂಬಾರ್, ರಸಂ, ಎಣ್ಣೆಗಾಯಿ, ಕೋಸಂಬರಿ, ಆಲೂ ಕುರ್ಮಾ, ಬಜ್ಜಿ, ಹಪ್ಪಳ, ಬಾನ (ಮೊಸರು ಬುತ್ತಿ), ಪಾನ್ಬೀಡ ಎಲ್ಲವನ್ನೂ ಕೆಲವೇ ಗಂಟೆಗಳಲ್ಲಿ ತಯಾರಿಸಿದರು.

ಪ್ರಣೀತಾ, ಪ್ರಭಾ, ಲಕ್ಷ್ಮಿ, ಶ್ರುತಿ, ಸಿಂಧು, ಸುನಿತಾ, ಗೀತಾ, ಪಲ್ಲವಿ, ನವ್ಯ, ಶೀಲಾ, ನಂದಿನಿ, ರೋಹಿಣಿ, ಅರುಣಾ ಮೊದಲಾದ ಗೃಹಿಣಿಯರು ಅಡುಗೆ ತಯಾರಿಸಿದರೆ, ವೇದಿಕೆ ನಿರ್ಮಿಸಲು ಸಂತೋಷ್, ರಾಜೇಶ್, ಶಾಂತವೀರಯ್ಯ, ಪ್ರವೀಣ, ವಸಂತ್, ಸಂಜು ಅರೆಬಾವಿ, ಮಹಾಂತೇಶ್, ಮನೋಹರ್, ಮಹಮದ್ ಆವೇಜ್ ಮೊದಲಾದ ಪುರುಷರು ಕೈಜೋಡಿಸಿದರು.

ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ, ಅಚ್ಚ ಕನ್ನಡತಿಯ ಸೀಮಂತ ಸಮಾರಂಭವನ್ನು ವಿದೇಶದಲ್ಲಿ ಅದ್ಧೂರಿಯಾಗಿ ಆಚರಿಸಿ, ಬಂಧು ಬಳಗ ಇಲ್ಲದ ಕೊರತೆಯನ್ನು ನೀಗಿಸಿದ ಹೊರನಾಡ ಕನ್ನಡಿಗರಿಗೆ ತಾರಾ– ವೀರೇಶ್ ದಂಪತಿ ಹೃದಯದಾಳದಿಂದ ಧನ್ಯವಾದ ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.