ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದಲ್ಲಿ ಮಹಿಳೆಯರ ನಿರುತ್ಸಾಹ

ಶೇ. 83.52 ಪುರುಷರು, ಶೇ. 81.37 ಮಹಿಳೆಯರು
Last Updated 14 ಮೇ 2018, 12:00 IST
ಅಕ್ಷರ ಗಾತ್ರ

ಚಾಮರಾಜನಗರ: ಈ ಬಾರಿಯ ಮತದಾನದಲ್ಲೂ ಪುರುಷರಿಗೆ ಹೋಲಿಸಿ ದರೆ ಮಹಿಳೆಯರು ನಿರುತ್ಸಾಹ ತೋರಿಸಿ ದ್ದಾರೆ. ಶೇ 2.15ರಷ್ಟು ವ್ಯತ್ಯಾಸ ಪುರುಷ ಮತ್ತು ಮಹಿಳೆಯರ ಮಧ್ಯೆ ಇದೆ.

ಜಿಲೆಯಲ್ಲಿ 4,14,366 ಪುರುಷರು, 4,16,460 ಮಹಿಳೆಯರು, 61 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 8,30,887 ಮತದಾರರಿದ್ದಾರೆ. ಇವರ ಪೈಕಿ 3,46,079 ಪುರುಷರು, 3,38,870 ಮಹಿಳೆಯರು, ತೃತೀಯ ಲಿಂಗಿಗಳು 9 ಮಂದಿ ಸೇರಿದಂತೆ ಒಟ್ಟಾರೆ 6,84,958 ಮತದಾರರು ಮತ ಚಲಾಯಿಸಿದ್ದಾರೆ. ಶೇ 83.52ರಷ್ಟು ಪುರುಷರು, ಶೇ 81.37ರಷ್ಟು ಮಹಿಳೆಯರು, ಶೇ 14.75ರಷ್ಟು ತೃತೀಯ ಲಿಂಗಿಗಳು ಸೇರಿದಂತೆ ಒಟ್ಟಾರೆ ಶೇ 82.44ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,05,638 ಪುರುಷರು, 1,01,949 ಮಹಿಳೆಯರು, ತೃತೀಯ ಲಿಂಗಿಗಳು 16 ಮಂದಿ ಸೇರಿದಂತೆ ಒಟ್ಟು 2,07,603 ಮತದಾರರಿದ್ದಾರೆ. ಈ ಪೈಕಿ 86,585 ಪುರುಷರು, 82,835 ಮಹಿಳೆಯರು, ತೃತೀಯ ಲಿಂಗಿಗಳು ಐವರು ಸೇರಿದಂತೆ ಒಟ್ಟು 1,69,425 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ 81.96ರಷ್ಟು ಪುರುಷರು, ಶೇ 81.25ರಷ್ಟು ಮಹಿಳೆಯರು, ಶೇ 31.25ರಷ್ಟು ತೃತೀಯ ಲಿಂಗಿಗಳು ಸೇರಿದಂತೆ ಒಟ್ಟಾರೆ ಕ್ಷೇತ್ರದಲ್ಲಿ ಶೇ 81.61ರಷ್ಟು ಮತದಾನವಾಗಿದೆ.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 1,05,129 ಪುರುಷರು, 1,06,380 ಮಹಿಳೆಯರು, ತೃತೀಯ ಲಿಂಗಿಗಳು 13 ಮಂದಿ ಸೇರಿದಂತೆ ಒಟ್ಟು 2,11,522 ಮತದಾರರಿದ್ದಾರೆ. ಈ ಪೈಕಿ 84,654 ಪುರುಷರು, 82,775 ಮಹಿಳೆಯರು, ತೃತೀಯ ಲಿಂಗಿಗಳು ಒಬ್ಬರು ಸೇರಿದಂತೆ ಒಟ್ಟು 1,67,430 ಮತದಾರರು ಮತ ಚಲಾಯಿಸಿದ್ದಾರೆ. ಶೇ 80.52ರಷ್ಟು ಪುರುಷರು, ಶೇ 77.81ರಷ್ಟು ಮಹಿಳೆಯರು, ಶೇ 7.69ರಷ್ಟು ಇತರರು ಸೇರಿದಂತೆ ಒಟ್ಟಾರೆ ಕ್ಷೇತ್ರದಲ್ಲಿ ಶೇ 79.15ರಷ್ಟು ಮತದಾನವಾಗಿದೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 1,01,659 ಪುರುಷರು, 1,04,471 ಮಹಿಳೆಯರು, ತೃತೀಯ ಲಿಂಗಿಗಳು 16 ಮಂದಿ ಸೇರಿದಂತೆ ಒಟ್ಟು 2,06,146 ಮತದಾರರಿದ್ದಾರೆ. ಈ ಪೈಕಿ 83,752 ಪುರುಷರು, 82,242 ಮಹಿಳೆಯರು, ತೃತೀಯ ಲಿಂಗಿಗಳು ಇಬ್ಬರು ಸೇರಿದಂತೆ ಒಟ್ಟು 1,65,996 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ 82.39ರಷ್ಟು ಪುರುಷರು, ಶೇ 78.72ರಷ್ಟು ಮಹಿಳೆಯರು, ಶೇ 12.50ರಷ್ಟು ಇತರರು ಸೇರಿದಂತೆ ಒಟ್ಟಾರೆ ಕ್ಷೇತ್ರದಲ್ಲಿ ಶೇ 80.52ರಷ್ಟು ಮತದಾನವಾಗಿದೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,01,940 ಪುರುಷ, 1,03,660 ಮಹಿಳೆಯರು, ತೃತೀಯ ಲಿಂಗಿಗಳು 16 ಮಂದಿ ಸೇರಿದಂತೆ ಒಟ್ಟು 2,05,616 ಮತದಾರರಿದ್ದಾರೆ. ಇವರಲ್ಲಿ 91,088 ಪುರುಷರು, 91,018 ಮಹಿಳೆಯರು, ತೃತೀಯ ಲಿಂಗಿಗಳು ಒಬ್ಬರು ಸೇರಿದಂತೆ ಒಟ್ಟು 1,82,107 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ 89.35ರಷ್ಟು ಪುರುಷರು, ಶೇ.87.80ರಷ್ಟು ಮಹಿಳೆ ಯರು, ಶೇ. 6.25ರಷ್ಟು ಇತರರು ಸೇರಿದಂತೆ ಒಟ್ಟಾರೆ ಕ್ಷೇತ್ರದಲ್ಲಿ ಶೇ 88.57ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT