ನನಗೀಗ 29 ವರ್ಷ. ಮೊದಲ ಹೆರಿಗೆಯಾದ ಆರು ತಿಂಗಳಿಗೆ ಮುಟ್ಟಾಗಲು ಶುರುವಾಯಿತು. ಇನ್ನೂ ಎರಡು ವರ್ಷ ಮಕ್ಕಳು ಬೇಡವೆಂದು ಹತ್ತಿರದ ಆಸ್ಪತ್ರೆಯ ವೈದ್ಯರಿಂದ ‘ಡಿಎಂಪಿಎ’ ಚುಚ್ಚುಮದ್ದು ಹಾಕಿಸಿಕೊಂಡಿರುವೆ. ಆದರೆ, ಈಗ ನನಗೆ ಪ್ರತಿ ತಿಂಗಳು ಸರಿಯಾಗಿ ಮುಟ್ಟಾಗುತ್ತಿಲ್ಲ. ಗರ್ಭ ಧರಿಸಿರಬಹುದೇನೋ ಎಂಬ ಆತಂಕದಿಂದ ಮನೆಯಲ್ಲೇ ಪದೇ ಪದೇ ಗರ್ಭಧಾರಣೆಯ ಪರೀಕ್ಷೆ ಮಾಡಿಕೊಳ್ಳುವಂತಾಗಿದೆ. ಉತ್ತರ ನೆಗೆಟಿವ್ ಬರುತ್ತಿದೆ. ಆದರೂ ಯಾಕೆ ಹೀಗಾಗುತ್ತದೆ? ಸಂತಾನಶಕ್ತಿ ನಿಯಂತ್ರಣ ಕ್ರಮಗಳಲ್ಲಿ ಯಾವುದು ಉತ್ತಮ ತಿಳಿಸುವಿರಾ?

ನೀವು ಇನ್ನೆರಡು ವರ್ಷ ಮಗು ಬೇಡವೆಂದು ನಿರ್ಧರಿಸಿರುವುದು ಉತ್ತಮ ವಿಚಾರ. ಎರಡು ಗರ್ಭಧಾರಣೆಗಳ ನಡುವೆ ಕನಿಷ್ಠ ಎರಡು ವರ್ಷವಾದರೂ ಅಂತರ ಇರಬೇಕು. ಆಗ ಮಾತ್ರ ತಾಯಿ ಹಾಗೂ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ. ಎರಡು ವರ್ಷ ಮಗುವಿಗೆ ಎದೆಹಾಲುಣಿಸಿ, ಜತೆಗೆ ಪೂರಕ ಆಹಾರವನ್ನು ನೀಡಿ. ಮೊದಲ ಸಾವಿರ ದಿನಗಳ ಕಾಲ ಮಗುವಿನ ಪೋಷಣೆ ಸರಿಯಾದರೆ, ಆ ಮಗುವಿನ ಆರೋಗ್ಯ ಸದೃಢವಾಗಿರುತ್ತದೆ ಎಂಬುದನ್ನು ನೆನಪಿಡಿ.

ಇನ್ನು ನೀವು ಹಾಕಿಸಿಕೊಂಡಿರುವ ‘ಡಿಎಂಪಿಎ’ ಚುಚ್ಚುಮದ್ದು ತಾತ್ಕಾಲಿಕ ಸಂತಾನಶಕ್ತಿ ನಿಯಂತ್ರಣ ಕ್ರಮವಾಗಿದೆ. ಇದನ್ನು ಮೂರು ತಿಂಗಳಿಗೊಮ್ಮೆ ತೆಗೆದುಕೊಳ್ಳಬೇಕಾಗುತ್ತದೆ. ಇದು ಮುಖ್ಯವಾಗಿ ಪ್ರೊಜೆಸ್ಟಿರಾನ್ ಹಾರ್ಮೋನ್ ಇರುವ ಚುಚ್ಚುಮದ್ದಾಗಿದೆ. ಹಾಗಾಗಿ, ಹೆಚ್ಚಿನ ಮಹಿಳೆಯರಲ್ಲಿ ಗರ್ಭಕೋಶದ ಒಳಪದರವು ಸರಿಯಾಗಿ ಬೆಳೆಯದೆ ಮುಟ್ಟು ನಿಯಮಿತವಾಗಿ ಆಗದೇ ಇರಬಹುದು. ಈ ಬಗ್ಗೆ ಆರೋಗ್ಯ ಕಾರ್ಯಕರ್ತರು ತಿಳಿಸಿರಬೇಕಲ್ಲವೇ?

‘ಡಿಎಂಪಿಎ’ ಅಥವಾ ‘ಅಂತರ’ ಚುಚ್ಚುಮದ್ದು ತೆಗೆದುಕೊಂಡಾಗ ಆಗುವ ಸಾಮಾನ್ಯ ಅಡ್ಡಪರಿಣಾಮ ಇದು. ದೀರ್ಘಾವಧಿಯಲ್ಲಿ ತೆಗೆದುಕೊಂಡಾಗ ಮೂಳೆಯ ಸಾಂದ್ರತೆ ತುಸು ಕಡಿಮೆಯಾಗಬಹುದು. ಈ ಬಗ್ಗೆ ಆತಂಕವಿದ್ದರೆ ಕಾಪರ್–ಟಿ ಹಾಕಿಸಿಕೊಳ್ಳಬಹುದು. ಹೆರಿಗೆಯಾದ ತಕ್ಷಣ ಅಥವಾ ನಂತರವೂ ಕಾಪರ್–ಟಿ ಅಳವಡಿಸಿಕೊಳ್ಳಬಹುದು. ಇನ್ನೊಂದು ಮಗು ಬೇಕು ಎನಿಸಿದಾಗ, ಎರಡು ತಿಂಗಳ ಮೊದಲು ಇದನ್ನು ತೆಗೆಸಿದರೆ ಸಾಕು. ಪತಿಯೂ ಕಾಂಡೋಮ್ ಬಳಸಬಹುದು. ಇದಲ್ಲದೇ ನೀವು ತಾತ್ಕಾಲಿಕವಾಗಿ ಗರ್ಭನಿರೋಧಕ ಗುಳಿಗೆಗಳನ್ನು ಬಳಸಬಹುದು. ಆದರೆ, ಇದನ್ನು ತಪ್ಪದೆ ದಿನವೂ ಸೇವಿಸಬೇಕಾಗುತ್ತದೆ. ತಾತ್ಕಾಲಿಕವಾಗಿ ಸಂತಾನಶಕ್ತಿ ನಿಯಂತ್ರಣ ಕ್ರಮಗಳು ಹಲವಾರು ಇವೆ. ಸರ್ಕಾರದಿಂದಲೂ ಉಚಿತವಾಗಿ ಲಭ್ಯ ಇವೆ. ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರೊಡನೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.