ಮಹಿಳೆಯರ ಭಯಮುಕ್ತ ಪ್ರವಾಸಕ್ಕೆ ಅನುವಾಗುವಂತೆ ಹಿಮಾಚಲ ಪ್ರದೇಶವು
‘ಷೀ ಟ್ರ್ಯಾವಲ್’ ಎಂಬ ಹೊಸ ಪ್ರವಾಸೋದ್ಯಮ ನೀತಿಯನ್ನು ರೂಪಿಸುತ್ತಿದೆ. ಸುರಕ್ಷತೆ, ಅಗತ್ಯ ಮಾಹಿತಿ ಮತ್ತು ಸಹಾಯ ನೀಡುವ ಮಹಿಳಾಸ್ನೇಹಿ ವ್ಯವಸ್ಥೆಯ ಮೂಲಕ ಸೋಲೋ ಮಹಿಳಾ ಟ್ರ್ಯಾವಲರ್ಗಳನ್ನು ಉತ್ತೇಜಿಸುವುದು ಈ ನೀತಿಯ ಧ್ಯೇಯ. ಮಹಿಳೆಯರಿಗೇ ಮೀಸಲಾಗಿರುವ ಪ್ರವಾಸೋದ್ಯಮ ಜಾಲತಾಣ ಆರಂಭವಾಗಲಿದ್ದು, ಇದರಲ್ಲಿ ಮಹಿಳೆಯರಿಗೆಂದು ವಿಶೇಷವಾಗಿ ಕಾಯ್ದಿರಿಸಲಾದ ವಸತಿಗೃಹಗಳು, ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಬೇಕಾದ ಸಂಖ್ಯೆಗಳು, ಅಧಿಕೃತ ಗೈಡ್ಗಳ ಮಾಹಿತಿ ಎಲ್ಲವೂ ಇರಲಿದೆ. ತಕ್ಷಣದ ನೆರವಿಗಾಗಿ ‘ಷೀ ಶೀಲ್ಡ್’ ಮೊಬೈಲ್ ಆ್ಯಪ್ ಬಿಡುಗಡೆಯಾಗಲಿದೆ. ಇದು ತುರ್ತು ಪರಿಸ್ಥಿತಿಯಲ್ಲಿ ನೆರವಾಗುವ ಪೊಲೀಸ್ ಎಮರ್ಜೆನ್ಸಿ ಸಂಖ್ಯೆ, ಸಹಾಯವಾಣಿ, ಲೈವ್ ಲೊಕೇಷನ್ ಶೇರಿಂಗ್ ವ್ಯವಸ್ಥೆ ಎಲ್ಲವನ್ನೂ ಒಳಗೊಳ್ಳಲಿದೆ.

ಮಹಿಳೆಯರಿಗೆ ಸುರಕ್ಷಿತ ಎನಿಸುವ ವಸತಿಗೃಹಗಳಿಗೆ ‘ಷೀ ಸ್ಪೇಸ್’ ಎಂಬ ಪ್ರಮಾಣಪತ್ರ ನೀಡಲಾಗುತ್ತದೆ. ಪ್ರಮುಖ ಪ್ರವಾಸಿ ಸ್ಥಳಗಳು ಮತ್ತು ವಸತಿಗೃಹಗಳಲ್ಲಿ ಮಹಿಳಾ ಪ್ರವಾಸಿಗರಿಗೆ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಫೀಮೇಲ್ ಸೇಫ್ಟಿ ಮಾರ್ಷಲ್ಗಳನ್ನು ನಿಯೋಜಿಸಲಾಗುತ್ತದೆ. ಇದಲ್ಲದೆ ಸುಮಾರು 200ಕ್ಕೂ ಹೆಚ್ಚು ತಾಣಗಳಲ್ಲಿ ಸಿ.ಸಿ. ಟಿ.ವಿ. ವ್ಯವಸ್ಥೆ, ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ‘ಸೇಫ್ಟಿ ಆಡಿಟ್’ ನಡೆಯಲಿದೆ. ಇದರೊಂದಿಗೆ ಈ ಹೊಸ ಪ್ರವಾಸೋದ್ಯಮ ನೀತಿಯು ಮಹಿಳೆಯರಿಗೆ ಉದ್ಯೋಗವನ್ನೂ ಸೃಷ್ಟಿಸಲಿದೆ. ಸುಮಾರು 5,000ಕ್ಕೂ ಹೆಚ್ಚು ಮಹಿಳೆಯರಿಗೆ ಗೈಡ್, ಟೂರ್ ಲೀಡರ್, ಹೋಮ್ಸ್ಟೇ ಆಪರೇಟರ್ ತರಬೇತಿ ನೀಡಲಾಗುತ್ತದೆ. ಪ್ರವಾಸೋದ್ಯಮ ಆಡಳಿತ ಸಮಿತಿಗಳಲ್ಲಿ ಶೇಕಡ 40ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ನೆರೆ ರಾಜ್ಯ ಕೇರಳವೂ ತನ್ನ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳಲ್ಲಿ ಮಹಿಳೆಯರಿಗೆ ಪ್ರಾಮುಖ್ಯ ನೀಡುತ್ತಿದ್ದು, ‘ಜಂಡರ್ ಇನ್ಕ್ಲೂಸಿವ್ ಟೂರಿಸಂ’ ಪರಿಚಯಿಸುತ್ತಿದೆ.

‘ಒಂಟಿಯಾಗಿ ಪ್ರವಾಸಕ್ಕೆ ತೆರಳುವ ಮಹಿಳೆಯರ ಸ್ವಾತಂತ್ರ್ಯವನ್ನು ಗೌರವಿಸುವ, ಅವರ ಘನತೆಯನ್ನು ಎತ್ತಿಹಿಡಿಯುವ, ಮಹಿಳೆಯರ ಹಕ್ಕುಗಳಿಗೆ ಕಾನೂನಿನ ಬೆಂಬಲ ನೀಡುವ ಈ ನೀತಿ ಶ್ಲಾಘನೀಯ. ಇಂತಹ ಪ್ರಯತ್ನಗಳು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ಜನ ಕಾಣುವ ರೀತಿಯಲ್ಲಿಯೂ ಬಹಳಷ್ಟು ಬದಲಾವಣೆಗಳನ್ನು ತರುತ್ತವೆ. ಕರ್ನಾಟಕದಲ್ಲಿ ಸಹ ಇಂತಹ ನೀತಿ ಅನುಷ್ಠಾನಕ್ಕೆ ಬಂದರೆ, ಸೋಲೋ ಮಹಿಳಾ ಟ್ರ್ಯಾವಲರ್ಗಳಿಗೆ ನಮ್ಮ ನಾಡು ಇನ್ನಷ್ಟು ಸುರಕ್ಷಿತ ಆಗುವುದರಲ್ಲಿ ಸಂದೇಹವಿಲ್ಲ’ ಎನ್ನುತ್ತಾರೆ ಬೆಂಗಳೂರಿನ ಸೋಲೋ ಟ್ರ್ಯಾವಲರ್ ಶ್ರೀವಿದ್ಯಾ ಹಾಗೂ ‘ಸ್ಕೈ ಟ್ರಿಪ್ಸ್’ ಟೂರ್ ಆಪರೇಟರ್ ಪ್ರತಿಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.