ನನ್ನ ಮಗಳಿಗೆ ಈಗ 14 ವರ್ಷ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಚ್ಪಿವಿ ಲಸಿಕೆ ಹಾಕಿಸಿಕೊಳ್ಳಲು ಶಾಲೆಯವರೂ ಆಶಾ ಕಾರ್ಯಕರ್ತೆಯರೂ ಒತ್ತಾಯ ಮಾಡಿ ಕರೆಯುತ್ತಿದ್ದಾರೆ. ನಮ್ಮ ಅಕ್ಕಪಕ್ಕದ ಕೆಲವರು, ಈ ವಯಸ್ಸಿನಲ್ಲೇ ಲಸಿಕೆ ಯಾಕೆ, ಮುಂದೆ ಮಕ್ಕಳಾಗದೇ ಇದ್ದರೆ, ಮುಟ್ಟಿನ ಏರುಪೇರು ಉಂಟಾದರೆ ಏನು ಮಾಡ್ತೀರಾ ಎಂದು ಕೇಳುತ್ತಿದ್ದಾರೆ. ಮಗಳು ಈಗಾಗಲೇ ತುಂಬಾ ದಪ್ಪವಿದ್ದು, ತಿಂಗಳ ಮುಟ್ಟು ಸರಿಯಾಗಿ ಆಗುತ್ತಿಲ್ಲ. ನನಗೆ ವ್ಯಾಕ್ಸಿನ್ ಹಾಕಿಸಬೇಕೋ ಬೇಡವೋ ಎನ್ನುವ ಗೊಂದಲವಿದೆ. ಏನು ಮಾಡಲಿ? ಈ ವ್ಯಾಕ್ಸಿನ್ನಿಂದ ಏನೂ ತೊಂದರೆ ಇಲ್ಲವೇ?
⇒ಸುಮಿತ್ರಾ, ಗುಬ್ಬಿ

ಈಗ ಭಾರತದಲ್ಲಿ 14 ವರ್ಷ ತುಂಬಿದ ಹೆಣ್ಣುಮಕ್ಕಳಿಗೆ ಎಲ್ಲೆಡೆ ಹಾಕಿಸುತ್ತಿರುವ ಲಸಿಕೆಯು ಹ್ಯೂಮನ್ ಪ್ಯಾಪಿಲೋಮ ವೈರಸ್ ಅಂದರೆ ಎಚ್ಪಿವಿ ವೈರಸ್ ವಿರುದ್ಧ ಹಾಕುವ ಲಸಿಕೆಯಾಗಿದೆ. ಈ ವೈರಸ್ ಶೇಕಡ 90ಕ್ಕೂ ಹೆಚ್ಚಿನ ಸಂದರ್ಭಗಳಲ್ಲಿ ಗರ್ಭಕೊರಳಿನ ಕ್ಯಾನ್ಸರ್ಗೆ ಕಾರಣವಾಗಿರುತ್ತದೆ. ಸರ್ ಹೆರಾಲ್ಡ್-ಜರ್-ಹುಸೇನ್ ಅವರು ಗರ್ಭಕೊರಳಿನ ಕ್ಯಾನ್ಸರ್ಗೆ ಈ ವೈರಸ್ ಕಾರಣವೆಂದು ಸಂಶೋಧಿಸಿ, 2008ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದೊಂದು ಸಣ್ಣ ಡಿಎನ್ಎ ವೈರಸ್ ಆಗಿದ್ದು, ಇದು ಲೋಳೆಪೊರೆಯಿಂದ ಮತ್ತು ಚರ್ಮದಿಂದ ಚರ್ಮಕ್ಕೆ ಹರಡಬಹುದು.

ಲೈಂಗಿಕವಾಗಿ ಸಕ್ರಿಯವಾಗಿರುವ ಎಲ್ಲರೂ ಜೀವಿತಾವಧಿ
ಯಲ್ಲಿ ಶೇಕಡ 90ಕ್ಕಿಂತ ಹೆಚ್ಚಿನ ಸಂದರ್ಭಗಳಲ್ಲಿ ಎಚ್ಪಿವಿ ಸೋಂಕಿಗೆ ಆರಂಭಿಕ ವಯಸ್ಸಿನಲ್ಲಿಯೇ ಒಳಪಟ್ಟರೂ ಉತ್ತಮ ರೋಗನಿರೋಧಕ ಶಕ್ತಿಯಿಂದ ಸೋಂಕು ಹಿಮ್ಮೆಟ್ಟಬಹುದು. ಆದರೂ ರೋಗನಿರೋಧಕ ಶಕ್ತಿ ಕಡಿಮೆಯಾದ ಸಂದರ್ಭ ದಲ್ಲಿ ಈ ಸೋಂಕು ಲೋಳೆಪೊರೆಯಿಂದ ಒಳ ಪ್ರವೇಶಿಸಿ ಎಚ್ಪಿವಿ ವೈರಸ್ನ ಡಿಎನ್ಎದಲ್ಲಿ ಜೀವಕೋಶದೊಳಗೆ ಸೇರಿ ರೂಪಾಂತರಕ್ಕೆ ಒಳಗಾಗಿ, ವೈರಸ್ನ ಪ್ರತಿಕೃತಿಗಳು ಉಂಟಾಗಬಹುದು. ಸೋಂಕು ಶೇಕಡ 90ರಷ್ಟು ಸಂದರ್ಭಗಳಲ್ಲಿ ಹಾಗೆಯೇ ಗುಣವಾಗುತ್ತದೆ. ಆದರೆ ಶೇಕಡ 0.8ರಿಂದ 10ರಷ್ಟು ಸಂದರ್ಭಗಳಲ್ಲಿ ವೈರಸ್ ಸೋಂಕು ಮುಂದಿನ ಹತ್ತರಿಂದ ಹದಿನೈದು ವರ್ಷದೊಳಗೆ ಪೂರ್ವಾಕ್ರಮಣಕಾರಿ ಸೋಂಕಾಗಿ ನಂತರ ಆಕ್ರಮಣಕಾರಿ ಕ್ಯಾನ್ಸರ್ ಆಗಿಯೂ
ಪರಿವರ್ತಿತವಾಗಬಹುದು. ಇಂತಹವರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ ಅನ್ನಿಸಿದರೂ ಅಭಿವೃದ್ಧಿ ಪಥದಲ್ಲಿ ಇರುವ ಭಾರತದಂತಹ ರಾಷ್ಟ್ರಗಳಿಗೆ ಬಹಳಷ್ಟು ಹೊರೆಯಾಗುತ್ತದೆ.

ಈ ವೈರಸ್ ಉಳಿಯುವಿಕೆಯನ್ನು ತೀವ್ರಗೊಳಿಸುವ ಅಂಶಗಳೆಂದರೆ, ಒಬ್ಬರಿಗಿಂತ ಹೆಚ್ಚು ಲೈಂಗಿಕ ಸಂಗಾತಿಗಳಿರು
ವುದು, ಕುಂದಿದ ರೋಗನಿರೋಧಕ ಶಕ್ತಿ, ಧೂಮಪಾನ, ಜನನಾಂಗ ಭಾಗದ ಸ್ವಚ್ಛತೆ ಕಾಪಾಡದೇ ಇರುವುದು, ಅಪೌಷ್ಟಿಕತೆ ಇತ್ಯಾದಿ. 14ನೇ ವಯಸ್ಸಿನಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಅತಿ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಸರ್ಕಾರದಿಂದ ಕೊಡುತ್ತಿರುವ ಗರ್ಡಾಸಿಲ್ ಎಂಬ ಎಚ್ಪಿವಿ ಲಸಿಕೆಯನ್ನು ಕೇವಲ ಒಂದು ಡೋಸ್ ಹಾಕಿಸುವುದರಿಂದ, ಈ ವ್ಯಾಕ್ಸಿನ್ ದೇಹದಲ್ಲಿ ಉತ್ತಮ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಉಂಟುಮಾಡಿ, ಸೋಂಕು ಕ್ಯಾನ್ಸರ್ ಹಂತಕ್ಕೆ ಹೋಗುವುದನ್ನು ತಡೆಗಟ್ಟುತ್ತದೆ.

ವಿಶ್ವದಲ್ಲಿ 2006ರಿಂದಲೇ 50 ಕೋಟಿ ಡೋಸ್ಗೂ ಹೆಚ್ಚಿನ ಪ್ರಮಾಣದಲ್ಲಿ ಈ ವ್ಯಾಕ್ಸಿನ್ ವಿತರಣೆಯಾಗಿ ಹೆಣ್ಣುಮಕ್ಕಳನ್ನು ಗರ್ಭಕೊರಳಿನ ಕ್ಯಾನ್ಸರ್ನಿಂದ ರಕ್ಷಿಸಿರುವುದು ದೃಢಪಟ್ಟಿದೆ. ಹಾಗಾಗಿ, ನಿಮ್ಮ ಮಗಳಿಗೆ ಈ ಲಸಿಕೆ ಹಾಕಿಸಿ. ಬಂಜೆತನ, ಮುಟ್ಟಿನ ಏರುಪೇರಿನಂತಹ ಸಮಸ್ಯೆಗಳೆಲ್ಲ ಇಂದಿನ ತಪ್ಪು ಜೀವನಶೈಲಿಯಿಂದ ಆಗುತ್ತಿರುವ ಪಿಸಿಒಡಿಯಂತಹ ಸಮಸ್ಯೆ
ಗಳಿಂದಲೇ ವಿನಾ ಎಚ್ಪಿವಿ ಲಸಿಕೆಯಿಂದ ಅಲ್ಲ.

ವಿಶ್ವ ಆರೋಗ್ಯ ಸಂಸ್ಥೆಯು ಎರಡು ಅಥವಾ ಮೂರು ಡೋಸ್ ಬದಲು ಒಂದೇ ಡೋಸ್ ಪರಿಣಾಮಕಾರಿ ಎಂದು 2023ರಲ್ಲಿಯೇ ಪರಿಗಣಿಸಿದೆ. ಲಸಿಕೆಗಳ ಬಗ್ಗೆ ಇರುವ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ತಿಳಿಸಿರುವ ಹಾಗೆ, ಇದು ಈ ವೈರಸ್ನ ನಾಲ್ಕು ಪ್ರಭೇದಗಳ ಅಕ್ರಮಣದ ವಿರುದ್ಧ ರಕ್ಷಣೆ ದೊರಕಿಸಿ, ಗರ್ಭಕೊರಳಿನ ಕ್ಯಾನ್ಸರ್, ಜನನಾಂಗದ ನರೋಳಿ, ವಾರ್ಟ್, ಯೋನಿಯ ಕ್ಯಾನ್ಸರ್ನಂತಹ ಬಾಧೆಗಳನ್ನು ತಡೆಗಟ್ಟುತ್ತದೆ. ನಡೆದಾಡುವ ಮೊದಲೇ ಪೋಲಿಯೊ ಲಸಿಕೆ ಹಾಕಿಸುವ ಹಾಗೆ, ಹದಿವಯಸ್ಸಿನಲ್ಲೇ ಲಸಿಕೆ ಹಾಕಿಸಿ ಭವಿಷ್ಯದಲ್ಲಿ ಗರ್ಭಕೊರಳಿನ ಕ್ಯಾನ್ಸರ್ ಅನ್ನು ಜಯಿಸಬಹುದು. ಹಾಗಾಗಿ, ಈ ಲಸಿಕೆ ಅತಿ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.