ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದಿನಾಚರಣೆ: ‘ಬಂಗಾರ’ದ ಪವರ್‌ ಲಿಫ್ಟರ್

Last Updated 7 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೊಜ್ಜು ಬೆಳೆದು ದೇಹದ ತೂಕ ಹೆಚ್ಚಾಗಿತ್ತು. ಅದನ್ನು ಕಡಿಮೆ ಮಾಡಿಕೊಳ್ಳಲು ಜಿಮ್‌ಗೆ ಹೋಗಲಾರಂಭಿಸಿದೆ. ಅಲ್ಲಿಯೇ ಪವರ್‌ ಲಿಫ್ಟಿಂಗ್‌ ಬಗ್ಗೆ ಆಸಕ್ತಿ ಬಂತು. ಇದೀಗ ಅದೇ ಕ್ಷೇತ್ರದಲ್ಲಿ ಮುಂದುವರಿದು, ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೇನೆ. ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುವ ಕನಸಿದೆ. ನಾನು ಪವರ್‌ ಲಿಫ್ಟಿಂಗ್ ಕೋಚ್ ಸಹ.

ಕರ್ನಾಟಕ ಪವರ್ ಲಿಫ್ಟಿಂಗ್ ಸಂಸ್ಥೆ ವತಿಯಿಂದ ಸಾಲಿಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಪವರ್ ಲಿಫ್ಟಿಂಗ್’ ಸ್ಪರ್ಧೆಯಲ್ಲಿ ಭಾಗವಹಿಸಿ ಬಂಗಾರದ ಪದಕ ಪಡೆದಿದ್ದೇನೆ. 2019ರಲ್ಲಿ ಮಂಗಳೂರಿನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲೂ ಬಂಗಾರದ ಪದಕ ಪಡೆದಿದ್ದು, 2020ರಲ್ಲಿ ನಡೆದಿದ್ದ ಹಿರಿಯರ ಸ್ಪರ್ಧೆಯಲ್ಲಿ ಕಂಚಿನ ಪದಕ ಸಿಕ್ಕಿದೆ.

2018ರಲ್ಲಿ ಭದ್ರಾವತಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಮೊದಲ ಬಾರಿ ಭಾಗವಹಿಸಿದ್ದೆ. ಅಲ್ಲಿ ನಾಲ್ಕನೇ ಸ್ಥಾನ ಸಿಕ್ಕಿತು. ಇನ್ನಷ್ಟು ಕಷ್ಟಪಟ್ಟರೆ ಮೂರನೇ ಅಥವಾ ಎರಡನೇ ಸ್ಥಾನ ಸಿಗಬಹುದೆಂದು ವ್ಯಾಯಾಮ ಮುಂದುವರಿಸಿದೆ.

ಬಾಲ್ಯದಿಂದಲೇ ಪಾಠಕ್ಕಿಂತ ಆಟದಲ್ಲಿ ಆಸಕ್ತಿ ಇತ್ತು. ಈ ಹಿಂದೆ ಆಕ್ಸೆಂಚರ್ ಹಾಗೂ ಬಿಜಿಎಸ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದೇನೆ. ಇದೀಗ ಸಂಸಾರ ಹಾಗೂ ವ್ಯಾಯಾಮಕ್ಕೆ ಮಾತ್ರ ಸೀಮಿತಳಾಗಿದ್ದೇನೆ.

ಪವರ್‌ ಲಿಫ್ಟಿಂಗ್‌ನಿಂದಾಗಿ ನನಗೆ ಧೈರ್ಯ ಬಂದಿದೆ. ಮಹಿಳೆಯರು ಯಾವುದಕ್ಕೂ ಹೆದರದೆ ಯಾವುದೇ ಕೆಲಸವಾದರೂ ಧೈರ್ಯದಿಂದ ಮುನ್ನುಗ್ಗಬೇಕು. ಆರಂಭದಲ್ಲಿ ತೆಗಳುವವರೇ ಹೆಚ್ಚು. ಯಶಸ್ಸು ಸಾಧಿಸಿದ ಮೇಲೆ ಎಲ್ಲರೂ ನಿಮ್ಮನ್ನು ಹೊಗಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT